ಚನ್ನರಾಯನ ದುರ್ಗಾ ಕೋಟೆಯು ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನಲ್ಲಿ ಇರುವ ಮತ್ತೊಂದು ಐತಿಹಾಸಿಕ ಬೆಟ್ಟದ ಕೋಟೆಯಾಗಿದೆ. ಈ ಕೋಟೆಯನ್ನು ಮಧುಗಿರಿಯ ಪಾಳೇಗಾರ ವಂಶಕ್ಕೆ ಸೇರಿದ ಚಿಕ್ಕಪ್ಪ ಗೌಡ ನಿರ್ಮಿಸಿದನು. ಈ ಕೋಟೆಯು ಸಮುದ್ರ ಮಟ್ಟದಿಂದ 3734 ಅಡಿ ಇದೆ.
ಈ ಕೋಟೆಯು ಬೆಂಗಳೂರಿಂದ ಸುಮಾರು 107 ಕಿ.ಮೀ ಮತ್ತು ತುಮಕೂರಿನಿಂದ 42 ಕಿ.ಮೀ ದೂರದಲ್ಲಿದೆ. ಹಾಗೂ ಮಧುಗಿರಿಯಿಂದ ಕೇವಲ 10 ಕಿ.ಮೀ ದೂರದಲ್ಲಿದೆ.
ಮಧುಗಿರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಆಡಳಿತಗಾರ ರಾಜ ಪಾಳೆಗಾರ ಚಿಕ್ಕಪ್ಪ ಗೌಡ ಈ ಏಳು ಸುತ್ತಿನ ಈ ಕೋಟೆಯನ್ನು ನಿರ್ಮಿಸಿದನು. ಇವರಿಗೆ ಚನ್ನಪ್ಪ ಗೌಡ ಎಂಬ ಮಗನಿದ್ದು, ಈತ ಅಕಾಲಿಕ ಮರಣ ಹೊಂದುತ್ತಾನೆ. ಅವನ ನೆನಪಿಗಾಗಿ ಚಿಕ್ಕಪ್ಪ ಗೌಡ ಈ ಕೋಟೆಯನ್ನು ನಿರ್ಮಿಸಿದನು. ಕೋಟೆಯೊಳಗೆ ಕೆಲವು ದೇವಾಲಯಗಳು ಮತ್ತು ಹಳೆಯ ರಚನೆಗಳಿವೆ. ಮಧ್ಯಕಾಲೀನ ಕಾಲದಲ್ಲಿ ಚನ್ನನಾರಾಯಣ ದುರ್ಗವು ಒಂದು ಕಾರ್ಯತಂತ್ರದ ಕೋಟೆಯಾಗಿತ್ತು ಮತ್ತು ಅದನ್ನು ಹೊಂದಲು ಅನೇಕ ಯುದ್ಧಗಳು ನಡೆದವು.
ಈ ಕೋಟೆಯ ಮೇಲೆ ವಿಶಾಲವಾದ ಒಂದು ನೀರನ ದೊಣೆ (ನೀರಿನ ಕೊಳ) ಕೂಡ ಇದೆ.
ಇತಿಹಾಸ
ಇಮ್ಮಡಿ ಚಿಕ್ಕಪ್ಪ ಗೌಡರು ಇವರಿಗೆ ಮೂರು ಜನ ಗಂಡು ಮಕ್ಕಳಿದ್ದರು. ಮೊದಲನೇ ಮಗ ತೋಟದೇಂದ್ರ ಅವರು ಅರವೇಕೋಟ ಯುದ್ದದಲ್ಲಿ ಮರಣ ಹೊಂದಿದರು. ಎರಡನೇ ಮಗ ಚೆನ್ನಪ್ಪ ಗೌಡ ಅಕಾಲಿಕ ಮರಣ ಹೊಂದುತ್ತಾನೆ ಮತ್ತು ನಂತರ ಮೂರನೇ ಮಗ ಸಪ್ಪೆನ್ದ್ರರು ಅಧಿಕಾರವನ್ನು ವಹಿಸಿಕೊಳ್ಳುತ್ತಾರೆ.
ಈ ಸಪ್ಪೆನ್ದ್ರರಿಗೆ ಮೂರೂ ಜನ ಗಂಡು ಮಕ್ಕಳು ಇರುತ್ತಾರೆ. ಮೊದಲನೇ ಮಗ ಸಂಗಪ್ಪ ಗೌಡರು, ಎರಡನೇ ಮಗ ಹಿರೇತೋಟಪ್ಪ ಗೌಡರು ಮತ್ತು ಮೂರನೇ ಮಗ ಕಾಳಚಿಕ್ಕಪ್ಪ ಗೌಡರು. ಇವರಿಗೆ ಕ್ರಮವಾಗಿ ಮಧುಗಿರಿ, ಮಿಡಿಗೇಶಿ ಮತ್ತು ಚನ್ನರಾಯ ದುರ್ಗವನ್ನು ಹಂಚಿ ಕೊಡಲಾಗುತ್ತದೆ.
ಮುಂದೆ ಕಾಳಚಿಕ್ಕಪ್ಪ ಗೌಡರಿಗೆ ಎರಡು ಜನ ಗಂಡು ಮಕ್ಕಳು ಇರುತ್ತಾರೆ. ರಾಮಪ್ಪ ಗೌಡರು ಮತ್ತು ತಿಮ್ಮಪ ಗೌಡರು. ಇವರ ನಡುವೆ ಅಧಿಕಾರಕ್ಕಾಗಿ ದಾಯಾದಿ ಕಲಹ ಪ್ರಾರಂಭವಾಗುತ್ತದೆ. ದಾಯಾದಿ ಕಲಹದಿಂದ ತಿಮ್ಮಪ್ಪ ಗೌಡರು ಅಂದಿನ ಮೈಸೂರು ಮಹಾರಾಜರು ಆದಂತಹ ಚಿಕ್ಕ ದೇವರಾಯ ಒಡೆಯರ ಹತ್ತಿರ ಸಹಾಯವನ್ನು ಕೇಳುತ್ತಾರೆ. ಸಹಾಯದ ಅವಕಾಶವನ್ನು ಪಡೆದುಕೊಂಡಂತಹ ದಳವಾಯಿ ದೇವರಾಜಯ್ಯನವರು ಅವರು ಮೈಸೂರಿನ ಸೇನೆಯನ್ನು ಮಹಾನಾಡಿನ ಮೇಲೆ ಆಕ್ರಮಣ ಮಾಡಿ ಮಧುಗಿರಿ ಮತ್ತು ಚನ್ನರಾಯನ ದುರ್ಗಾವನ್ನು ವಶ ಮಾಡಿಕೊಳ್ಳುತ್ತಾರೆ. ಹೇಗೆ ಈ ದಾಯಾದಿ ಕಲಹದಿಂದ ಮಹಾನಾಡಿನ ಅಧಿಕಾರವನ್ನು ಕಳೆದುಕೊಳ್ಳುತ್ತಾರೆ.
ಭೇಟಿ ನೀಡಿ