ಜೋಳದ ರಾಶಿ ಗುಡ್ಡ

ಜೋಳದ ರಾಶಿ ಗುಡ್ಡವು ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಹೊಸಹಳ್ಳಿ ಗ್ರಾಮದ ಬಳಿಯಿರುವ ಬೆಟ್ಟವಾಗಿದೆ. ತಾಲೂಕಿನಲ್ಲಿ ಆಗಾಗ ಸುರಿಯುವ ಮಳೆಯಿಂದಾಗಿ ಜೋಳದ ರಾಶಿ ಗುಡ್ಡವು ಹಸಿರು ಸೀರೆಯನ್ನು ಹೊದ್ದಂತೆಯೇ ಕಾಣುತ್ತದೆ. ಅಚ್ಚಹಸಿರಿನಿಂದ ಕಂಗೊಳಿಸುವ ಈ ಬೆಟ್ಟವು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ.

ಜೋಳದ ರಾಶಿ ಗುಡ್ಡದ ದೂರಗಳು

  • ಬೆಂಗಳೂರು – 112 ಕಿ.ಮೀ
  • ತುಮಕೂರು – 42 ಕಿ.ಮೀ
  • ಮಧುಗಿರಿ – 10 ಕಿ.ಮೀ
  • ಗೌರಿಬಿದನೂರು ರೈಲ್ವೆ ನಿಲ್ದಾಣ – 47 ಕಿ.ಮೀ

ಜೋಳವೆಲ್ಲ ರಾಶಿಯಾದ ಕಥೆ

ಹಲವಾರು ವರ್ಷಗಳ ಹಿಂದೆ, ಒಬ್ಬ ಮಹಿಳೆ ಜೋಳವನ್ನು ತೂರಲು ಸಾಧ್ಯವಾಗದೆ, “ಜೋಳವೆಲ್ಲಾ ರಾಶಿಯಾಗಲಿ, ಹೊಟ್ಟುಗಳೆಲ್ಲ ಕಲ್ಲಾಗಲಿ” ಎಂದು ಶಾಪ ನೀಡಿದಳು ಎಂದು ಹೇಳಲಾಗುತ್ತದೆ. ಆ ನಂತರದಿಂದಲೇ ಈ ಗುಡ್ಡ ಜೋಳದ ರಾಶಿಯಂತೆ ಕಾಣುತ್ತದೆ ಎಂದು ಗ್ರಾಮದ ಹಿರಿಯರು ಕಥೆ ಹೇಳುತ್ತಾರೆ.

ಭೇಟಿ ನೀಡಿ
ಮಧುಗಿರಿ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ತುಮಕೂರು ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section