ಮಧುಗಿರಿ ಕೋಟೆ

ಮಧುಗಿರಿ ಕೋಟೆವು ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನಲ್ಲಿದೆ. ಈ ಕೋಟೆಯ ಬೆಟ್ಟವು ಏಷ್ಯಾದ ಎರಡನೇ ಅತಿದೊಡ್ಡ ಏಕಶಿಲಾ ಬೆಟ್ಟವೆಂದು ಪ್ರಸಿದ್ಧವಾಗಿದೆ. ಇದು ಸಮುದ್ರ ಮಟ್ಟದಿಂದ ಸುಮಾರು 3958 ಅಡಿ (1192 ಮೀಟರ್) ಎತ್ತರದಲ್ಲಿದೆ.

ಮಧುಗಿರಿ ಕೋಟೆಯ ದೂರಗಳು

  • ಬೆಂಗಳೂರು – 104 ಕಿ.ಮೀ
  • ತುಮಕೂರು – 47 ಕಿ.ಮೀ
  • ಮಧುಗಿರಿ – 2 ಕಿ.ಮೀ
  • ಗೌರಿಬಿದನೂರು ರೈಲ್ವೆ ನಿಲ್ದಾಣ – 39 ಕಿ.ಮೀ

ಮಧುಗಿರಿ ಕೋಟೆ ಕುರಿತು ಇತಿಹಾಸದಲ್ಲಿ ಮಹತ್ವದ ಉಲ್ಲೇಖಗಳಿವೆ. ವಿಜಯನಗರ ಸಾಮ್ರಾಜ್ಯದ ಅರಸರಾದ ಹರಿಹರ ಅವರ ಶಾಸನಗಳಲ್ಲಿ ಈ ಊರನ್ನು “ಮದಗಿರಿ ಹಳ್ಳಿ” ಎಂದು ಉಲ್ಲೇಖಿಸಲಾಗಿದೆ. ನಂತರ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ಇಲ್ಲಿ ಉಪವಿಭಾಗಾಧಿಕಾರಿಯಾಗಿದ್ದಾಗ ಈ ಊರಿಗೆ “ಮಧುಗಿರಿ” ಎಂಬ ಹೆಸರು ಪ್ರಚಲಿತಕ್ಕೆ ಬಂದಿತು.

ಇತಿಹಾಸ ಪ್ರಸಿದ್ಧ “ಆ ನಾಡ ಪ್ರಭುಗಳು” ಎಂಬ ಮನೆತನದ ಆಡಳಿತ ಕಾಲದಲ್ಲಿ, ಚಿಕ್ಕಪ್ಪ ಗೌಡ ಎಂಬ ಪಾಳೇಗಾರನು ಕ್ರಿ.ಶ. 1609ರಲ್ಲಿ ಈ ಕೋಟೆ ನಿರ್ಮಾಣವನ್ನು ಪ್ರಾರಂಭಿಸಿದನು. ನಂತರ 18ನೇ ಶತಮಾನದಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಕೋಟೆಯನ್ನು ಮತ್ತಷ್ಟು ಭದ್ರಪಡಿಸಿದರು. ಇದು ಮೈಸೂರು ಅರಸರ ಪ್ರಮುಖ ರಕ್ಷಣಾ ಕೋಟೆಯಾಗಿದ್ದು, 1791ರಲ್ಲಿ ಆಂಗ್ಲೋ-ಮೈಸೂರು ಯುದ್ಧಗಳು ಸಮಯದಲ್ಲಿ ಬ್ರಿಟಿಷರ ವಶಕ್ಕೆ ಸೇರಿತು.

ಬೆಟ್ಟದ ತಳಭಾಗದಲ್ಲಿ ನಾಲ್ಕು ಗುಹೆಗಳಿದ್ದು, “ಭೀಮನ ದೊಣೆ” ಮತ್ತು “ನವಿಲು ದೊಣೆ” ಎಂಬ ಎರಡು ಕೆರೆಗಳೂ ಇವೆ. ಬೆಟ್ಟದ ತುದಿಯಲ್ಲಿ ಹಿಂದೆ ಇದ್ದ ಗೋಪಾಲಕೃಷ್ಣ ದೇವಾಲಯವು ಈಗ ಅವಶೇಷಗಳಾಗಿ ಉಳಿದಿದೆ.

ಕೋಟೆಯ ಗೋಡೆಗಳು ಬಹಳ ಕಡಿದಾಗಿದ್ದು, ಶತ್ರುಗಳಿಗೆ ಅವುಗಳನ್ನು ಏರುವುದು ಬಹುತೇಕ ಅಸಾಧ್ಯವಾಗಿತ್ತು. ಕೋಟೆಯ ಪ್ರಮುಖ ಆಕರ್ಷಣೆಯೆಂದರೆ ಅದರ ಭವ್ಯ ಪ್ರವೇಶದ್ವಾರ “ದಿಡ್ಡಿ ಬಾಗಿಲು”. ಈ ದ್ವಾರವು ಸುಮಾರು 25 ಅಡಿ ಎತ್ತರ ಮತ್ತು 17 ಅಡಿ ಅಗಲವಿದ್ದು, ಒಳಭಾಗದಲ್ಲಿ ಕೋಣೆಗಳ ಸರಣಿಯನ್ನು ಹೊಂದಿದೆ. ಕೋಟೆಯೊಳಗೆ ಹಲವು ನೀರಿನ ತೊಟ್ಟಿಗಳಿದ್ದು, ಗೋಪಾಲಕೃಷ್ಣ ದೇವರಿಗೆ ಸಮರ್ಪಿತ ದೇವಾಲಯವೂ ಇದೆ.

ಭೇಟಿ ನೀಡಿ
ಮಧುಗಿರಿ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ತುಮಕೂರು ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section