ಮೆಡಿಗೇಶಿ ಕೋಟೆ

ಮಿಡಿಗೇಶಿ ಕೋಟೆವು ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನಲ್ಲಿರುವ ಒಂದು ಐತಿಹಾಸಿಕ ಕೋಟೆಯಾಗಿದೆ. 14ನೇ ಶತಮಾನದಲ್ಲಿ ಮಿಡಿಗೇಶಿಯು ಅತ್ಯಂತ ಶ್ರೀಮಂತ ಮತ್ತು ಬಲಿಷ್ಠ ಪಾಳೇಪಟ್ಟಾಗಿತ್ತು. ಈ ಬೆಟ್ಟದ ಮೇಲೆ ಕೋಟೆಯನ್ನು ನಾಗರೆಡ್ಡಿ ನಿರ್ಮಿಸಿದರು.

ಮೆಡಿಗೇಶಿ ಕೋಟೆಯ ದೂರಗಳು

  • ಬೆಂಗಳೂರು – 125 ಕಿ.ಮೀ
  • ತುಮಕೂರು – 68 ಕಿ.ಮೀ
  • ಮಧುಗಿರಿ – 22 ಕಿ.ಮೀ
  • ಗೌರಿಬಿದನೂರು ರೈಲ್ವೆ ನಿಲ್ದಾಣ – 57 ಕಿ.ಮೀ

ಮಿಡಿಗೇಶಿ ಕೋಟೆ ಇತಿಹಾಸದ

14ನೇ ಶತಮಾನದಲ್ಲಿ ಮಿಡಿಗೇಶಿಯು ಅತ್ಯಂತ ಶ್ರೀಮಂತ ಮತ್ತು ಬಲಿಷ್ಠ ಪಾಳೇಪಟ್ಟಾಗಿತ್ತು. ನಲ್ಲೊಬ ನಾಯಕನು ಇಲ್ಲಿ ಪ್ರಭಾವಶಾಲಿ ಪಾಳೇಗಾರನಾಗಿ ಬೆಳೆಯುತ್ತಾ, ಮಿಡಿಗೇಶಿಯನ್ನು ಸಮೃದ್ಧ ಪ್ರದೇಶವನ್ನಾಗಿ ಅಭಿವೃದ್ಧಿಪಡಿಸಿದನು. ಇದನ್ನು ಕಂಡ ವಿಜಯನಗರ ಸಾಮ್ರಾಜ್ಯದ ಸಾಳುವ ನರಸಿಂಹ ನಾಯಕ ಯುದ್ಧ ನಡೆಸಿ, ನಾಯಕನನ್ನು ಮೋಸದಿಂದ ಹತ್ಯೆ ಮಾಡಿದನು. ಈ ಘಟನೆಗಳು ಕ್ರಿ.ಶ. 1486ರಿಂದ 1491ರ ಅವಧಿಯಲ್ಲಿ ನಡೆದವು ಎಂದು ಹೇಳಲಾಗುತ್ತದೆ.

ನಂತರ ಪರಸು ರಾವತನು ಪಾಳೇಗಾರನಾಗಿ ಆಡಳಿತ ನಡೆಸಿದನು. ಆತನ ನಂತರ ನಾಗರೆಡ್ಡಿ ಪಾಳೇಗಾರನಾದನು. ನಾಗರೆಡ್ಡಿಯ ಪತ್ನಿಯ ಹೆಸರು “ಮಿಡಿಗೇಶಿ” ಎಂದು ಹೇಳಲಾಗುತ್ತದೆ. ಆಕೆಯ ಮೇಲಿನ ಪ್ರೀತಿಯಿಂದಲೇ ಈ ಊರಿಗೆ “ಮಿಡಿಗೇಶಿ” ಎಂಬ ಹೆಸರು ಬಂದಿತು ಎಂಬ ಸ್ಥಳೀಯ ಕತೆ ಪ್ರಸಿದ್ಧವಾಗಿದೆ.

ಕೆಲವು ವರ್ಷಗಳ ಬಳಿಕ ಪಕ್ಕದ ಪಾಳೇಪಟ್ಟಿನ ಪಾಳೇಗಾರ ಚಿಕ್ಕಪ್ಪ ಗೌಡನು ಮಿಡಿಗೇಶಿಯನ್ನು ವಶಪಡಿಸಿಕೊಂಡನು. ನಂತರದ ಕಾಲದಲ್ಲಿ ಹೈದರ್ ಅಲಿ ಈ ಕೋಟೆಯನ್ನು ತನ್ನ ಅಧೀನಕ್ಕೆ ಪಡೆದು ಆಡಳಿತ ನಡೆಸಿದನು. ಇದರಿಂದ ಚಿಕ್ಕಪ್ಪ ಗೌಡನ ವಂಶಸ್ಥರು ಸ್ಥಳ ತೊರೆದು ಹೊರಟರು.

ಅನಂತರ ಮರಾಠರು ಈ ಪ್ರದೇಶವನ್ನು ವಶಪಡಿಸಿಕೊಂಡರು. 1791ರಲ್ಲಿ ಲಾರ್ಡ್ ಕಾರ್ನವಾಲಿಸ್ ದಕ್ಷಿಣ ಭಾರತಕ್ಕೆ ಆಕ್ರಮಣ ನಡೆಸಿದ ಸಂದರ್ಭದಲ್ಲಿ, ಚಿಕ್ಕಪ್ಪ ಗೌಡನ ವಂಶಸ್ಥರು ಮತ್ತೆ ಇಲ್ಲಿ ಬಂದು ನೆಲೆಸಲು ಪ್ರಯತ್ನಿಸಿದರು. ಆದರೆ ಅವರಿಗೆ ಆಡಳಿತ ನಡೆಸಲು ಸಾಧ್ಯವಾಗಲಿಲ್ಲ.

ಆ ಸಂದರ್ಭದಲ್ಲಿ ಉತ್ತರ ಭಾರತದಲ್ಲಿ ಬಹುಮನಿ (ಬಹಮನಿ) ಆಡಳಿತ ಬಲಿಷ್ಠವಾಗಿತ್ತು. ಕಮ್ಮಾರ್ ಉದ್ಧೀನ್ ಎಂಬ ಸೈನ್ಯಾಧಿಪತಿ ದಕ್ಷಿಣದ ಕಡೆಗೆ ಬಲಿಷ್ಠ ಸೇನೆಯೊಂದಿಗೆ ಬಂದಾಗ, ಚಿಕ್ಕಪ್ಪ ಗೌಡನ ವಂಶಸ್ಥರು ಮತ್ತೊಮ್ಮೆ ಮಿಡಿಗೇಶಿಯಿಂದ ಪಲಾಯನ ಮಾಡಬೇಕಾಯಿತು. ಬಳಿಕ ಈ ಕೋಟೆ ಬಹಮನಿ ಅರಸರ ಅಧೀನಕ್ಕೆ ಸೇರಿತು.

ಭೇಟಿ ನೀಡಿ
ಮಧುಗಿರಿ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ತುಮಕೂರು ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section