ಜಯಮಂಗಲಿ ಕೃಷ್ಣಮೃಗ ಸಂರಕ್ಷಣಾ ಮೀಸಲು

ಜಯಮಂಗಲಿ ಕೃಷ್ಣಮೃಗ ಸಂರಕ್ಷಣಾ ಪ್ರದೇಶವು ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮೈದನಹಳ್ಳಿಯಲ್ಲಿ ಇದೆ. ಇದು ಕರ್ನಾಟಕದ ಡೆಕ್ಕನ್ ಪ್ರಸ್ಥಭೂಮಿಯ ಬಯಲು ಪ್ರದೇಶದ ಒಂದು ಪ್ರಮುಖ ಭಾಗವಾಗಿದೆ. ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೃಷ್ಣಮೃಗಗಳು ಕಂಡುಬರುತ್ತವೆ.

ಜಯಮಂಗಲಿ ಕೃಷ್ಣಮೃಗ ಸಂರಕ್ಷಣಾ ಮೀಸಲು ಪ್ರದೇಶದ ದೂರಗಳು

  • ಬೆಂಗಳೂರು – 120 ಕಿ.ಮೀ
  • ತುಮಕೂರು – 60 ಕಿ.ಮೀ
  • ಮಧುಗಿರಿ – 47 ಕಿ.ಮೀ

ಜಯಮಂಗಲಿ ಕೃಷ್ಣಮೃಗ ಸಂರಕ್ಷಣಾ ಪ್ರದೇಶಕ್ಕೆ ಭೇಟಿ ನೀಡಲು ಸೆಪ್ಟೆಂಬರ್‌ನಿಂದ ಡಿಸೆಂಬರ್‌ವರೆಗೆ ಉತ್ತಮ ಸಮಯವಾಗಿದೆ.

ಈ ಸಂರಕ್ಷಣಾ ಪ್ರದೇಶವನ್ನು ಪ್ರತಿದಿನ ಬೆಳಿಗ್ಗೆ 6:00ರಿಂದ ಸಂಜೆ 6:00ರವರೆಗೆ ಭೇಟಿ ನೀಡಬಹುದು. ಇಲ್ಲಿ ಪ್ರವೇಶ ಶುಲ್ಕ ಪ್ರತಿ ವ್ಯಕ್ತಿಗೆ ರೂ.100/- ಆಗಿದ್ದು, ಕ್ಯಾಮೆರಾ ಶುಲ್ಕ ರೂ.50/- ನಿಗದಿಪಡಿಸಲಾಗಿದೆ.

1992ರಲ್ಲಿ ಈ ಪ್ರದೇಶದ ಆಡಳಿತವನ್ನು ಕಂದಾಯ ಇಲಾಖೆಗೆ ವರ್ಗಾಯಿಸಲಾಯಿತು. 1997ರಲ್ಲಿ ಇದನ್ನು ಸಂರಕ್ಷಣಾ ಮೀಸಲು ಪ್ರದೇಶವನ್ನಾಗಿ ಘೋಷಿಸಲು ಪ್ರಸ್ತಾಪ ಮಾಡಲಾಗಿದ್ದು, ಅಂತಿಮವಾಗಿ 2007ರಲ್ಲಿ ಮೀಸಲು ಪ್ರದೇಶವಾಗಿ ಘೋಷಿಸಲಾಯಿತು. ಒಟ್ಟು 993 ಎಕರೆ ಪ್ರದೇಶದಲ್ಲಿ 893 ಎಕರೆ ಭಾಗವನ್ನು ಸಂರಕ್ಷಣಾ ಮೀಸಲು ಪ್ರದೇಶವಾಗಿ ಘೋಷಿಸಲಾಗಿದೆ.

ಇಲ್ಲಿ ಸುಮಾರು 26 ಜಾತಿಯ ಸರಿಸೃಪಗಳು ಹಾಗೂ 14 ಬಗೆಯ ಹಾವುಗಳು ಕಂಡುಬರುತ್ತವೆ. ಈ ಮೀಸಲು ಪ್ರದೇಶದಲ್ಲಿ ಸುಮಾರು 125 ಪಕ್ಷಿ ಪ್ರಭೇದಗಳಿವೆ. ಕೃಷ್ಣಮೃಗಗಳ ಜೊತೆಗೆ 67 ಬಗೆಯ ಚಿಟ್ಟೆಗಳು ಮತ್ತು ಇತರೆ ಸಸ್ತನಿಗಳೂ ಇಲ್ಲಿ ಕಾಣಿಸಿಕೊಳ್ಳುತ್ತವೆ.

ಭೇಟಿ ನೀಡಿ
ಮಧುಗಿರಿ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ತುಮಕೂರು ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section