ಜೋಳದ ರಾಶಿ ಗುಡ್ಡವು ಕರ್ನಾಟಕ ರಾಜ್ಯದ ತುಮಕೂರಿನ ಮಧುಗಿರಿ ತಾಲೂಕು ಹೊಸಹಳ್ಳಿ ಗ್ರಾಮದ ಬೆಟ್ಟವಾಗಿದೆ. ತಾಲ್ಲೂಕಿನಲ್ಲಿ ಆಗೊಮ್ಮೆ ಈಗೊಮ್ಮೆ ಸುರಿಯುತ್ತಿರುವ ಮಳೆಗೆ ಜೋಳದ ರಾಶಿ ಗುಡ್ಡ ಹಸಿರಿನ ಸೀರೆಯಿಂದ ಹೊದಿಕೆ ಮಾಡಿದಂತೆ ಕಾಣುತ್ತಿದೆ. ಜೋಳದ ರಾಶಿ ಗುಡ್ಡ ಅಚ್ಚಹಸಿರಿನಿಂದ ಕಂಗೊಳಿಸುತ್ತಿದ್ದು, ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.
ಈ ಬೆಟ್ಟವು ಬೆಂಗಳೂರಿನಿಂದ 121 ಕಿ.ಮೀ ಮತ್ತು ತುಮಕೂರು ನಗರದಿಂದ 44 ಕಿ.ಮೀ ದೂರದಲ್ಲಿದೆ. ಹಾಗು ಮಧುಗಿರಿ ಪಟ್ಟಣದಿಂದ ಕೇವಲ 12 ಕಿ.ಮೀ ದೂರದಲ್ಲಿದೆ.
ಜೋಳವೆಲ್ಲ ರಾಶಿಯಾದ ಕಥೆ
ಹಲವಾರು ವರ್ಷಗಳ ಹಿಂದೆ ಮಹಿಳೆಯೊಬ್ಬರು ಜೋಳವನ್ನು ತೂರಲಾಗದೇ ಜೋಳವೆಲ್ಲ ಜೋಳದ ರಾಶಿಯಾಗಲಿ, ಕೂಗೆಲ್ಲಾ (ಹೊಟ್ಟು) ಕೂವಿನ ಕಲ್ಲಾಗಲಿ ಎಂದು ಶಾಪ ನೀಡಿದ್ದರಂತೆ. ಅಂದಿನಿಂದಲೂ ಈ ಗುಡ್ಡ ಜೋಳದ ರಾಶಿಯಂತೆ ಕಾಣುತ್ತಿದೆ ಎಂದು ಗ್ರಾಮದ ಹಿರಿಯರು ಕಥೆ ಹೇಳುತ್ತಾರೆ.
ಭೇಟಿ ನೀಡಿ