ಭಸ್ಮಂಗಿ ಕೋಟೆ

ಭಸ್ಮಂಗಿ ಕೋಟೆಯು ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆ ಮಧುಗಿರಿಯಾ ಕಿತ್ತಗಲಿ ಗ್ರಾಮದ ಹತ್ತಿರ ಭಸ್ಮಂಗಿ ಎಂಬ ಹಳ್ಳಿಯಲ್ಲಿ ಇರುವ 17 ನೇ ಶತಮಾನದಲ್ಲಿ ಸ್ಥಳೀಯ ಆಡಳಿತಗಾರ ಬೂದಿ ಬಸವಪ್ಪ ನಾಯಕ ಮಣ್ಣಿನಿಂದ ನಿರ್ಮಿಸಿದ ಕೋಟೆಯಾಗಿದೆ.

ಈ ಕೋಟೆಯು ಬೆಂಗಳೂರಿನಿಂದ 132 ಕಿ.ಮೀ ಮತ್ತು ತುಮಕೂರು ನಗರದಿಂದ 60 ಕಿ.ಮೀ ದೂರದಲ್ಲಿದೆ. ಹಾಗು ಮಧುಗಿರಿ ಪಟ್ಟಣದಿಂದ ಕೇವಲ 30 ಕಿ.ಮೀ ದೂರದಲ್ಲಿದೆ.

ಇತಿಹಾಸ

ಇಲ್ಲಿ ಮೊದಲು ಕೋಟೆ ಕಟ್ಟಿದವರು ಬೂದಿಬಸವಪ್ಪ ನಾಯಕ ಎಂಬುವವನು, ಈ ಕೋಟೆಯನ್ನು ಮಣ್ಣಿನಲ್ಲಿ ಕಟ್ಟಿದ್ದರು. ನಂತರದ ದಿನಗಳಲ್ಲಿ ಟಿಪ್ಪು ಸುಲ್ತಾನ್ ತಂದೆ ಹೈದರಾಲಿ ಈ ಪ್ರದೇಶವನ್ನು ಕ್ರಿಸ್ತ ಶಕ 1768ರಲ್ಲಿ ವಶಪಡಿಸಿಕೊಂಡನು. ಬೂದಿ ಬಸವಪ್ಪನಾಯಕ ಕಟ್ಟಿಸಿದ್ದ ಮಣ್ಣಿನ ಕೋಟೆಯನ್ನು ಕೆಡವಿ ಇಟ್ಟಿಗೆ ಮತ್ತು ಕಲ್ಲಿನಿಂದ ಕೋಟೆಯನ್ನೂ ಅರಮನೆಯನ್ನೂ ಕಟ್ಟಿಸಿದ.

ಭಸ್ಮಾಂಗಿ ಕೋಟೆ ಬಿಜವರ ತೋಟದ ಸಿದ್ಧಲಿಂಗ ಭೂಪಾಲ ಮತ್ತು ಮುಮ್ಮಡಿ ಚಿಕ್ಕಭೂಪಾಲ ಈ ಇಬ್ಬರು ಪ್ರಸಿದ್ಧ ದೊರೆಗಳ ಕೇಂದ್ರವಾಗಿತ್ತು. ಮುಮ್ಮಡಿ ಚಿಕ್ಕಭೂಪಲ ಕನ್ನಡ ಮತ್ತು ಸಂಸ್ಕಂತಕ್ಕೆ ಪ್ರೋತ್ಸಾಹ ನೀಡುತ್ತಿದ್ದನು. ಅಲ್ಲದೆ ತಾನೇ ಅಭಿನವ ಭಾರತ ಸೌರಸಂಗ್ರಹವೆಂಬ ಸಂಸ್ಕಂತ ಗ್ರಂಥವನ್ನು ಬರೆದಿದ್ದನು. ಚಿಕ್ಕದೇವರಾಜ 17ನೆಯ ಶತಮಾನದ ಅಂತ್ಯದಲ್ಲಿ ಇದನ್ನು ಗೆದ್ದಕೊಂಡುನು. ಹಿಂದೆ ಇದು ಪಾಳೆಯಪಟ್ಟಿನ ಕೇಂದ್ರವಾಗಿತ್ತು. ಮಧುಗಿರಿಯ ವಾಯವ್ಯದಲ್ಲಿರುವ ಸಿದ್ಧಾಪುರದಲ್ಲಿ ಒಂದು ಹಳೆ ಕೋಟೆ ಇದೆ. ಇಲ್ಲಿಯ ಶಾಸನದ ಪ್ರಕಾರ ಬಿಜವರದ ಮಹಾನಾಡುಪ್ರಭು ಚಿಕ್ಕಪ್ಪಗೌಡ 1593ರಲ್ಲಿ ಭಸ್ಮಾಂಗಿ ಕಟ್ಟಿದನೆಂದು ತಿಳಿದುಬರುತ್ತದೆ.

ಭೇಟಿ ನೀಡಿ
ಮಧುಗಿರಿ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ತುಮಕೂರು ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section