SRS ಬೆಟ್ಟ

SRS ಬೆಟ್ಟವು ಕರ್ನಾಟಕ ರಾಜ್ಯದ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲ್ಲೂಕಿನಲ್ಲಿ ಇರುವ ಒಂದು ಬೆಟ್ಟವಾಗಿದೆ. ಈ ಬೆಟ್ಟವನ್ನು ರೇವಣ್ಣ ಸಿದ್ದೇಶ್ವರ ಬೆಟ್ಟ ಎಂದೂ ಕರೆಯುತ್ತಾರೆ. ಈ ಬೆಟ್ಟವು ಸಮುದ್ರ ಮಟ್ಟದಿಂದ 3066 ಅಡಿ ಎತ್ತರದಲ್ಲಿದೆ.

SRS ಬೆಟ್ಟದ ದೂರಗಳು

  • ಬೆಂಗಳೂರು – 68 ಕಿ.ಮೀ
  • ರಾಮನಗರ – 15 ಕಿ.ಮೀ
  • ರಾಮನಗರ ರೈಲ್ವೆ ನಿಲ್ದಾಣ – 14 ಕಿ.ಮೀ

ಈ ಸ್ಥಳದಲ್ಲಿ ಒಟ್ಟು ಮೂರು ದೇವಾಲಯಗಳಿವೆ — ಬೆಟ್ಟದ ಮೇಲೆ ರೇವಣಸಿದ್ದೇಶ್ವರ ದೇವಾಲಯ, ಮಧ್ಯದಲ್ಲಿ ಭೀಮೇಶ್ವರಿ ದೇವಾಲಯ ಮತ್ತು ಬೆಟ್ಟದ ಕೆಳಭಾಗದಲ್ಲಿ ರೇಣುಕಾಂಬ ದೇವಾಲಯವಿದೆ.

ಕಲಿಯುಗದಲ್ಲಿ ವೀರಶೈವ ತತ್ತ್ವವನ್ನು ಕಲಿಸಲು ಮತ್ತು ಬೋಧಿಸಲು ಬಂದ ಐದು ಆಚಾರ್ಯರಲ್ಲಿ ರೇಣುಕಾಚಾರ್ಯರು ಒಬ್ಬರು. ಇವರನ್ನು ರೇವಣಾರಾಧ್ಯ ಅಥವಾ ರೇವಣಸಿದ್ಧ ಎಂದು ಕರೆಯುತ್ತಾರೆ. ಅವರು ವೀರಶೈವ ತತ್ತ್ವವನ್ನು ಪ್ರಸಾರ ಮಾಡಲು ಏಷ್ಯಾ ಖಂಡದ ವಿವಿಧ ಭಾಗಗಳಿಗೆ ಪ್ರಯಾಣ ಬೆಳೆಸಿದರು.

ರೇವಣಸಿದ್ದೇಶ್ವರರು ತಮ್ಮ ವೀರಶೈವ ತತ್ತ್ವದ ಅಭಿಯಾನದ ಸಂದರ್ಭದಲ್ಲಿ, ಒಮ್ಮೆ ಕರ್ನಾಟಕದ ರಾಮನಗರ ಬಳಿಯ ಅವೇರಹಳ್ಳಿಯಲ್ಲಿರುವ ಪರ್ವತದ ಮೇಲೆ ವಾಸಿಸುತ್ತಿದ್ದರು. ಆ ಸ್ಥಳವನ್ನು ಪ್ರಸ್ತುತ ಪವಿತ್ರ ಶಿವಕ್ಷೇತ್ರವೆಂದೂ ಕರೆಯುತ್ತಾರೆ. ಕೊನೆಗೆ ಅವರು ಮತ್ತೊಮ್ಮೆ ಕೊಲ್ಲಿಸಾಕ್ಷಿ ಕ್ಷೇತ್ರದಲ್ಲಿದ್ದಾಗ, ಶಿವನ ಇಚ್ಛೆಯಂತೆ ಲಿಂಗೈಕ್ಯರಾದರು ಮತ್ತು ಶಿವನ ವಾಸಸ್ಥಾನವಾದ ಕೈಲಾಸವನ್ನು ತಲುಪಿದರು. ಅವೇರಹಳ್ಳಿಯಲ್ಲಿ ಅವರು ಅನುಷ್ಠಾನ ಮಾಡಿದ ಸ್ಥಳವನ್ನು ರೇವಣಸಿದ್ದೇಶ್ವರ ಬೆಟ್ಟ ಎಂದು ಕರೆಯಲಾಗುತ್ತದೆ.

ರೇವಣಸಿದ್ದೇಶ್ವರ ಬೆಟ್ಟವು ಅನೇಕ ವಿಶಿಷ್ಟತೆಗಳಿಂದ ಕೂಡಿದೆ. ಏಕಶಿಲಾ ಗಿರಿಯಾದ ಇದು ಅತ್ಯಂತ ಕಡಿದಾದರೂ, ಏರುವುದಕ್ಕೆ ಮೆಟ್ಟಿಲುಗಳಿವೆ. ಭಕ್ತಿ ಮತ್ತು ಸಾಹಸ ಎರಡೂ ಏಕೀಭವಿಸುವುದರಿಂದ, ಬೆಟ್ಟ ಹತ್ತುವುದು ವಿಶಿಷ್ಟವಾದ ಅನುಭವವನ್ನು ನೀಡುತ್ತದೆ. ಬೆಟ್ಟದ ತಪ್ಪಲನ್ನು ಸಮೀಪಿಸುತ್ತಿದ್ದಂತೆಯೇ, ಸುಂದರ ಉದ್ಯಾನವನದ ಮಧ್ಯದಲ್ಲಿ ರೇವಣಸಿದ್ದೇಶ್ವರನ ತಂಗಿಯಾದ ರೇಣುಕಾಂಬೆಯ ದೇವಾಲಯವಿದೆ.

ಭೇಟಿ ನೀಡಿ
ರಾಮನಗರ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section