ಶ್ರೀ ಸಂಜೀವರಾಯ ಸ್ವಾಮಿ ದೇವಾಲಯವು ಕರ್ನಾಟಕ ರಾಜ್ಯದ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ದೇವರಹೂಸಹಳ್ಳಿ ಗ್ರಾಮದಲ್ಲಿ ಇರುವ ಸರಿ ಸಮಾರು 500 ರಿಂದ 600 ವರ್ಷಗಳ ಇತಿಹಾಸ ಉಳ್ಳ, ಶ್ರೀ ವ್ಯಾಸರಾಯರು ಸ್ವತಃ ಸ್ಥಾಪಿಸಿದ ದೇವಾಲಯವಾಗಿದೆ.
ಈ ದೇವಾಲಯವು ಬೆಂಗಳೂರಿಂದ 63 ಕಿ.ಮೀ ಮತ್ತು ರಾಮನಗರದಿಂದ ಸುಮಾರು 10 ಕಿ.ಮೀ ಮತ್ತು ಚನ್ನಪಟ್ಟಣದಿಂದ ಕೇವಲ 04 ಕಿ.ಮೀ ದೂರದಲ್ಲಿದೆ.
ಇತಿಹಾಸ
ಈ ದೇವಾಲಯವು ಸಮಾರು 500 ರಿಂದ 600 ವರ್ಷಗಳ ಇತಿಹಾಸ ಹೊಂದಿರುವಂತಹ ಕ್ಷೇತ್ರವಾಗಿದೆ. ಈ ದೇವಾಲಯವು ಹಿಂದೆ ದಟ್ಟ ಅರಣ್ಯವಾಗಿ ಇರುತ್ತೆ. ಆ ಒಂದು ಸಂದರ್ಭದಲ್ಲಿ ವ್ಯಾಸರಾಯರು ಒಮ್ಮೆ ತಮ್ಮ ಅನುಷ್ಠಾನವನ್ನು ಮುಗಿಸಿ ವಾಪಸು ಹೋಗುವ ಸಮಯದಲ್ಲಿ, ರಾಮ-ನಾಮ ಮಾಡುತಿದ್ದ ಒಂದು ವಾಣಿ ಕೇಳಿಸುತ್ತದೆ. ವಾಣಿ ಎಲ್ಲಿಂದ ಬರುತಿದೆ ಎಂದು ವ್ಯಾಸರಾಯರು ಹುಡುಕುತ್ತ ಹೋಗುತ್ತಾರೆ. ಆ ಒಂದು ಸಂದರ್ಭದಲ್ಲಿ ಶ್ರೀ ಆಂಜನೇಯ ಸ್ವಾಮಿಯ ದರ್ಶನವಾಗುತ್ತೆ. ಆಗ ವ್ಯಾಸರಾಯರು ಕೇಳಿಕೊಳ್ಳುತ್ತಾರೆ, ಈ ಕ್ಷೇತ್ರದಲ್ಲಿ ನೆಲೆಸಿ ಜನರಿಗೆ ಅನುಗ್ರಹ ಮಾಡಿಕೊಡಬೇಕಾಗಿ ಕೇಳಿ ಕೊಳ್ಳುತ್ತಾರೆ. ಆಗ ಆಂಜನೇಯ ಸ್ವಾಮಿಯು ತಥಾಸ್ತು ಎಂದು ಹೇಳಿ ಆ ಕ್ಷೇತ್ರದಲ್ಲಿ ನೆಲೆಸುತ್ತಾರೆ
ಭೇಟಿ ನೀಡಿ




