ಶ್ರೀ ಸಂಜೀವರಾಯ ಸ್ವಾಮಿ ದೇವಾಲಯವು ಕರ್ನಾಟಕ ರಾಜ್ಯದ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ದೇವರಹೂಸಹಳ್ಳಿ ಗ್ರಾಮದಲ್ಲಿ ಇರುವ, ಸುಮಾರು 500 ರಿಂದ 600 ವರ್ಷಗಳ ಇತಿಹಾಸ ಹೊಂದಿರುವ, ಶ್ರೀ ವ್ಯಾಸರಾಯರು ಸ್ವತಃ ಪ್ರತಿಷ್ಠಾಪಿಸಿದ ದೇವಾಲಯವಾಗಿದೆ.
ಈ ದೇವಾಲಯವು ಬೆಂಗಳೂರಿನಿಂದ 63 ಕಿ.ಮೀ, ರಾಮನಗರದಿಂದ ಸುಮಾರು 10 ಕಿ.ಮೀ ಹಾಗೂ ಚನ್ನಪಟ್ಟಣದಿಂದ ಕೇವಲ 4 ಕಿ.ಮೀ ದೂರದಲ್ಲಿದೆ.
ಇತಿಹಾಸ
ಈ ದೇವಾಲಯವು ಸುಮಾರು 500 ರಿಂದ 600 ವರ್ಷಗಳ ಇತಿಹಾಸ ಹೊಂದಿರುವ ಪವಿತ್ರ ಕ್ಷೇತ್ರವಾಗಿದೆ. ಈ ಸ್ಥಳವು ಹಿಂದೆ ದಟ್ಟ ಅರಣ್ಯ ಪ್ರದೇಶವಾಗಿತ್ತು. ಆ ಸಮಯದಲ್ಲಿ ವ್ಯಾಸರಾಯರು ತಮ್ಮ ಅನುಷ್ಠಾನವನ್ನು ಮುಗಿಸಿ ವಾಪಸು ತೆರಳುತ್ತಿದ್ದಾಗ, “ರಾಮನಾಮ” ಜಪಿಸುತ್ತಿದ್ದ ಒಂದು ದಿವ್ಯ ವಾಣಿ ಅವರ ಕಿವಿಗೆ ಕೇಳಿಸಿತು. ಆ ವಾಣಿ ಎಲ್ಲಿಂದ ಬರುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಅವರು ಹುಡುಕುತ್ತ ಹೋದರು.
ಆ ಸಮಯದಲ್ಲಿ ಅವರಿಗೆ ಶ್ರೀ ಆಂಜನೇಯ ಸ್ವಾಮಿಯ ದರ್ಶನವಾಯಿತು. ಆಗ ವ್ಯಾಸರಾಯರು ಪ್ರಾರ್ಥಿಸಿ — “ಸ್ವಾಮೀ, ನೀವು ಈ ಕ್ಷೇತ್ರದಲ್ಲಿ ನೆಲೆಸಿ ಜನರಿಗೆ ಅನುಗ್ರಹ ಮಾಡಬೇಕು” ಎಂದು ಬೇಡಿಕೊಂಡರು. ಅದಕ್ಕೆ ಶ್ರೀ ಆಂಜನೇಯ ಸ್ವಾಮಿಯು “ತಥಾಸ್ತು” ಎಂದು ಆಶೀರ್ವದಿಸಿ, ಆ ಕ್ಷೇತ್ರದಲ್ಲೇ ಶ್ರೀ ಸಂಜೀವರಾಯ ಸ್ವಾಮಿಯಾಗಿ ಶಾಶ್ವತವಾಗಿ ನೆಲೆಸಿದರು.
ಭೇಟಿ ನೀಡಿ




