ಜಾನಪದ ಲೋಕವು ಕರ್ನಾಟಕ ರಾಜ್ಯದ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ಬೆಂಗಳೂರು ಮೈಸೂರು ಹೆದ್ದಾರಿ ರಸ್ತೆಯ ರಾಮನಗರ ತಾಲೂಕಿನ ದೊಡ್ಡಮಣ್ಣುಗುಡ್ಡೆ ಅರಣ್ಯ ವ್ಯಾಪಿಯಲ್ಲಿ, ಕರ್ನಾಟಕದ ಜನಪದ ಕಲಾ ಪರಂಪರೆಯನ್ನು ಜೀವಂತವಾಗಿಟ್ಟುಕೊಳ್ಳುವ ಉದ್ದೇಶದಿಂದ ಸ್ಥಾಪಿಸಲಾದ ಜನಪದ ಸಂಸ್ಕೃತಿ ಮ್ಯೂಸಿಯಂ ಆಗಿದೆ. ಎಚ್ ಎಲ್ ನಾಗೇಗೌಡರು ಅವರು 1979ರಲ್ಲಿ ಈ ಕಲಾಕೇಂದ್ರವನ್ನು ಸ್ಥಾಪಿಸಿದರು.
ಜಾನಪದ ಲೋಕವು ಬೆಂಗಳೂರಿಂದ 57 ಕಿ.ಮೀ ಮತ್ತು ರಾಮನಗರದಿಂದ ಕೇವಲ 04ಕಿ.ಮೀ ದೂರದಲ್ಲಿದೆ.
ಕರ್ನಾಟಕದ ಗ್ರಾಮೀಣ ಪರಿಸರದ ಭೂತಕಾಲದ ನಾಡಿಮಿಡಿತವನ್ನು ಜೀವಂತವಾಗಿಡುವ ಉದ್ದೇಶದಿಂದ, ಜಾನಪದ ಲೋಕವನ್ನು ಸುಂದರವಾಗಿ ಮರುಸೃಜಿಸಲಾಗಿದೆ. ಸುಮಾರು 15 ಎಕರೆ ಪ್ರದೇಶದಲ್ಲಿ ನಿರ್ಮಿತವಾಗಿರುವ ಈ ಲೋಕವು, ರಾಜ್ಯದ ಜನಪದ ಪರಂಪರೆಯ ಜೀವಂತ ಮೆರವಣಿಗೆಯಾಗಿದೆ.
ಪ್ರವೇಶ ದ್ವಾರದ ಬಳಿ, ಜಾನಪದ ಲೋಕದ ಸ್ಥಾಪಕರಾದ ನಾಡೋಜ ದಿ. ನಾಗೇಗೌಡರ ಭವ್ಯ ಶಿಲ್ಪವು ನಿಲುಕಿದ್ದು, ಅದು ಭೇಟಿದಾರರಿಗೆ ಆತ್ಮೀಯ ಸ್ವಾಗತವನ್ನು ನೀಡುತ್ತದೆ. ಈ ಶಿಲ್ಪದ ಹಿಂಭಾಗದಲ್ಲಿರುವ ಲೋಕಮಾತಾ ವಸ್ತು ಸಂಗ್ರಹಾಲಯದಲ್ಲಿ, ಕರ್ನಾಟಕದ ಗ್ರಾಮೀಣ ಬದುಕಿನಲ್ಲಿ ಬಳಸಿದ ಗೃಹೋಪಯೋಗಿ ವಸ್ತುಗಳ ಅಪಾರ ಸಂಗ್ರಹವಿದೆ.
ಜಾನಪದ ಲೋಕದ ಪ್ರಮುಖ ಆಕರ್ಷಣೆಯೆಂದರೆ, ಸುಮಾರು 1500 ಜನರು ಕೂತುಕೊಳ್ಳಬಹುದಾದ ವಿಶಾಲ ಬಯಲು ರಂಗಮಂದಿರ. ಗ್ರೀಸ್‌ನ ಎಪಿಕ್ ರಂಗಮಂದಿರ ಮಾದರಿಯಲ್ಲಿ ಈ ವೇದಿಕೆಯನ್ನು ರೂಪಿಸಲಾಗಿದೆ. ಇಲ್ಲಿ ವರ್ಷವಿಡಿ ಸಾಹಿತ್ಯ, ನಾಟಕ, ಸಂಗೀತ ಮತ್ತು ನೃತ್ಯಗಳಂತಹ ಅನೇಕ ಸಾಂಸ್ಕೃತಿಕ ಹಾಗೂ ಜನಪದ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ.
ಜನಪದ ಲೋಕದ ಪ್ರಮುಖ ಆಕರ್ಷಣೆಗಳು ಮತ್ತು ವಿಭಾಗಗಳು:
- ಚಿತ್ರಕುಟೀರ (Video Scope): ಜಾನಪದ ಕಲೆಗಳಿಗೆ ಸಂಬಂಧಿಸಿದ ಸಾಕ್ಷ್ಯಚಿತ್ರಗಳು ಹಾಗೂ ದೃಶ್ಯ ಪ್ರದರ್ಶನಗಳಿಗಾಗಿ ಇಲ್ಲಿ ಪ್ರತ್ಯೇಕ ಸಭಾಂಗಣವಿದೆ. ಇದು ಲೋಕಮಾತಾ ಮಂದಿರದ ಸಮೀಪದಲ್ಲಿದೆ.
- ಲೋಕಮಂದಿರ: ಗ್ರಾಮೀಣ ಕಲೆಗಳು ಮತ್ತು ಕಲಾ ಪ್ರದರ್ಶನಗಳಿಗೆ ಬಳಸುವ ವಿವಿಧ ವಾದ್ಯಗಳು, ಹಳ್ಳಿಗರು ಬಳಸುವ ಸರಕು ಸಾಧನಗಳು, ತೊಗಲು ಗೊಂಬೆ, ಯಕ್ಷಗಾನ ಹಾಗೂ ಬಯಲಾಟದ ಗೊಂಬೆಗಳು, ಹಳೆಯ ನಾಣ್ಯಗಳು, ಅಳತೆ ಮಾಪಕಗಳು ಮೊದಲಾದುವು ಇಲ್ಲಿನ ಪ್ರಮುಖ ಸಂಗ್ರಹ ವಸ್ತುಗಳಾಗಿವೆ.
- ಅಯ್ಯಂಗಾರರ ಮಾಳ: ಹಳೆಯ ಕಾಲದ ಶೈಲಿಯಲ್ಲಿ ನಿರ್ಮಿತ ಮನೆ ಮಾದರಿ ಅಯ್ಯಂಗಾರ್ ಸಮುದಾಯದ ಜೀವನಶೈಲಿಯನ್ನು ಪ್ರತಿಬಿಂಬಿಸುವ ವಿನ್ಯಾಸ.
- ಶಿಲ್ಪ ಮಾಳ: ಕಲ್ಲು ಹಾಗೂ ಮರದಲ್ಲಿ ಹೊತ್ತಿಕೊಂಡಿರುವ ವಿವಿಧ ಜನಪದ ಶಿಲ್ಪಗಳ ಪ್ರದರ್ಶನ.
- ಕುಂಬಾರಿಕೆ ವಿಭಾಗ: ಹಳ್ಳಿಯ ಕಂದಕಗಳಲ್ಲಿ ಉಪಯೋಗಿಸುವ ಮಡಿಕೆ, ಹಂಡೆ, ಪಾನಪಾತ್ರೆ ಮೊದಲಾದ ಮಣ್ಣಿನ ಸಾಮಗ್ರಿಗಳ ತಯಾರಿ ಹಾಗೂ ಪ್ರದರ್ಶನ.
- ಗೊಂಬೆ ತಯಾರಿಕೆ ವಿಭಾಗ: ವಿವಿಧ ಮಾದರಿಗಳ ತೊಗಲು ಗೊಂಬೆಗಳು ಹಾಗೂ ಮಣ್ಣು, ಮರದಿಂದ ತಯಾರಿಸಲಾದ ಜನಪದ ಗೊಂಬೆಗಳ ಪ್ರದರ್ಶನ.
ಜಾನಪದ ಲೋಕದ ಪರಿಷತ್ತಿನ ಉದ್ದೇಶಗಳು
- ಗ್ರಾಮೀಣ ಜನರ ವೇಷಭೂಷಣಗಳು ಅವರು ಉಪಯೋಗಿಸುತ್ತಿದ್ದ ವಸ್ತುಗಳು, ಕೃಷಿಗೆ ಸಂಬಂಧಪಟ್ಟ ವಸ್ತುಗಳ ಸಂಗ್ರಹ.
- ಗ್ರಾಮೀಣ ಜನರ ಗಾದೆಗಳು, ಕಥೆಗಳು, ಬಯಲಾಟ ಮುಖ್ಯವಾಗಿ ಜಾನಪದ ಪತ್ರಿಕೆಯ ಪ್ರಕಟಣೆ.
- ಜಾನಪದ ಮೌಲ್ಯಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಬೆಳೆಸುವುದು. ಜಾನಪದ ವಿಷಯದಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾಥಿಗಳಿಗೆ ಬಹುಮಾನ ನೀಡುವುದು. ಶಾಲಾ ಕಾಲೇಜುಗಳಲ್ಲಿ ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದು.
- ಜಾನಪದ ಕಲೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವುದು. ಅಲ್ಲಲ್ಲಿ ಜಾನಪದ ಕಲೆಗಳ ಪ್ರದರ್ಶನ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಅವಕಾಶ ಕಲ್ಪಿಸುವುದು.
- ಹಳ್ಳಿಯ ಜನರ ಮದುವೆ, ಜಾತ್ರೆ, ತೇರು, ಹಬ್ಬ, ಸಂಪ್ರದಾಯಗಳು ಅವರ ಜೀವನ ಶೈಲಿಯನ್ನು ಸಾಕ್ಷ್ಯ ಚಿತ್ರಗಳ ತಯಾರಿಸುವುದರ ಮೂಲಕ ಜೀವಂತವಾಗಿಡುವುದು.
- ಜನಪದ ಸ್ಪರ್ಧೆಗಳು, ಕಲಾ ಮೇಳಗಳನ್ನು ಆಯೋಜಿಸುವುದು.
- ಜಾನಪದ ಗೀತೆ ಬಯಲಾಟ, ಡೊಳ್ಳುಕುಣಿತಗಳನ್ನು ರೇಡಿಯೋ ಮತ್ತು ಟಿ.ವಿ.ಗಳಲ್ಲಿ ಪ್ರಸಾರವಾಗಲು ಅನುಕೂಲವಾಗುವಂತೆ ಕಲಾವಿದರನ್ನು ತರಭೇತಿ ಗೊಳಿಸುವುದು.
- ಜಾನಪದ ಕಲೆಗಳನ್ನು ಕಲಿಸುವುದಕ್ಕಾಗಿ ಒಂದು ಕಲಾ ಶಾಲೆಯನ್ನು ತೆರೆಯುವುದು.
- ಈ ಕಾರಣದಿಂದ ಬೆಂಗಳೂರಿನಲ್ಲಿ ಒಂದು ಜಾನಪದ ಲೋಕವನ್ನು ಸ್ಥಾಪಿಸುವ ಉದ್ದೇಶವನ್ನು ಹೊಂದಿದೆ.
ತ್ರೈವಾರ್ಷಿಕ ಜಾನಪದ ಯೋಜನೆ
ಜಾನಪದ ಪರಿಷತ್ತು ತ್ರೈವಾರ್ಷಿಕ ಜಾನಪದ ಯೋಜನೆಯನ್ನು ರೂಪಿಸಿದ್ದು, ಮೂರು ಹಂತಗಳಲ್ಲಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಉದ್ದೇಶಿಸಿರುತ್ತದೆ. ತ್ರೈವಾರ್ಷಿಕ ಯೋಜನೆಯ ವಿವರಗಳು-
- ಜಾನಪದ ಸಂಗೀತ ತರಭೇತಿ.
- ಜಾನಪದ ರಂಗಭೂಮಿ ತರಭೇತಿ.
- ಜಾನಪದ ಮಾಹಿತಿ ಕೇಂದ್ರ.
- ಜಾನಪದ ಕಲೆಗಳ ತರಭೇತಿ.
- ಜಾನಪದ ಕ್ರೀಡೆಗಳು.
- ಜಾನಪದ ಕಾರ್ಯಗಾರಗಳು.
- ಜಾನಪದ ಕಲಾವಿದರ ಗ್ಯಾಲರಿ ನಿರ್ಮಾಣ.
- ಜಾನಪದ ಪುಸ್ತಕ ಸಂಗ್ರಹಾಲಯ.
- ಬುಡಕಟ್ಟು ಜನಾಂಗಗಳ ಕಲೆಗಳ ಸಂರಕ್ಷಣೆ ಮತ್ತು ತರಭೇತಿ.
ಸಮಯ
ಜನಪದ ಲೋಕವು ಬುಧವಾರದಿಂದ ಸೋಮವಾರದವರೆಗೆ ಪ್ರತಿದಿನ ಬೆಳಿಗ್ಗೆ 9:30 ರಿಂದ ಸಂಜೆ 5:00 ರವರೆಗೆ ತೆರೆದಿರುತ್ತದೆ. ಪ್ರತಿ ಮಂಗಳವಾರ ರಜಾದಿನವಾಗಿರುತ್ತದೆ.
ಪ್ರವೇಶ ಶುಲ್ಕ | |
ಹಿರಿಯರಿಗೆ | RS.100/- |
ವಿದೇಶಿಯರಿಗೆ | Rs.200/- |
12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ | RS.50/- |
ಶಿಕ್ಷಣ ಸಂಸ್ಥೆಗಳಿಗೆ ವಿಶೇಷ ಪ್ಯಾಕೇಜ್‌ಗಳು | |
12 ವರ್ಷ ಮೇಲ್ಪಟ್ಟ ಮಕ್ಕಳಿಗೆ | ರೂ.80/- (ಶಾಲಾ ಗುರುತಿನ ಚೀಟಿಯನ್ನು ಹಾಜರುಪಡಿಸಬೇಕು) |
12 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಶಾಲಾ ಪ್ಯಾಕೇಜ್‌ಗಳು ಬರುತ್ತವೆ | Rs.40/- |
ಶಾಲಾ ಪ್ಯಾಕೇಜ್‌ನಲ್ಲಿ ಶಾಲಾ ಮಕ್ಕಳೊಂದಿಗೆ ಬರುವ ಶಿಕ್ಷಕರು | RS.50/- |
ಇತರೆ ಶುಲ್ಕಗಳು | |
ಸ್ಟಿಲ್ ಕ್ಯಾಮೆರಾ + ವಿಡಿಯೋ ಕ್ಯಾಮೆರಾ | RS.590/- + GST |
ಪೂರ್ವ-ವಿವಾಹ | Rs.5900/- + GST |
ಬೇಬಿ ಶೂಟ್ | RS.1000/- + GST |
ಮಾಡೆಲಿಂಗ್ ಶೂಟ್ | Rs.5900/- + GST |
ಚಲನಚಿತ್ರ ಶೂಟಿಂಗ್ | Rs.25000/- + GST |
ಟಿವಿ ಧಾರಾವಾಹಿ | Rs.20000/- + GST |
ವಿಳಾಸ
ರಾಜ್ಯ ಹೆದ್ದಾರಿ 17, P722+6XW, ದೊಡ್ಡಮಣ್ಣುಗುಡ್ಡೆ ಅರಣ್ಯ, ಬೆಂಗಳೂರು ಬೆಂಗಳೂರು, ರಾಮನಗರ, ದೊಡ್ಡಮಣ್ಣುಗುಡ್ಡೆ ಅರಣ್ಯ, ಕರ್ನಾಟಕ 562159