ಕೂಟಗಲ್ ತಿಮ್ಮಪ್ಪನ ಬೆಟ್ಟ ಅಥವಾ T M ಬೆಟ್ಟ ಕರ್ನಾಟಕ ರಾಜ್ಯದ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ರಾಮನಗರ ತಾಲ್ಲೂಕಿನ ಕೂಟಗಲ್ ಗ್ರಾಮದಲ್ಲಿ ಇರುವ ಬೆಟ್ಟವಾಗಿದೆ. ಬೆಟ್ಟದ ಮೇಲೆ ಶ್ರೀ ತಿಮ್ಮಪ್ಪ ಸ್ವಾಮಿ ದೇವಾಲಯ ಇದೆ.
ಈ ಬೆಟ್ಟವು ಬೆಂಗಳೂರಿನಿಂದ 64 ಕಿ.ಮೀ ಮತ್ತು ರಾಮನಗರದಿಂದ 11 ಕಿ.ಮೀ ದೂರದಲ್ಲಿದೆ.
ಬೆಟ್ಟವನ್ನು ಮೆಟ್ಟಿಲಿನ ಮೂಲಕ ಹತ್ತಬಹುದು ಅಥವಾ ನೇರವಾಗಿ ವಾಹನದಿಂದ ಹೋಗಬಹುದಾಗಿದೆ. ಬೆಟ್ಟದ ಮೇಲೆ ನಿಂತು ನೋಡಿದರೆ ಸುತ್ತಮುತ್ತಲಿನ ಪರಿಸರವನ್ನು ವೀಕ್ಷಿಸಬಹುದಾಗಿದೆ. ಬೆಟ್ಟದ ವಾಯುವ್ಯ ಭಾಗದಲ್ಲಿ ಕೂಡುಗಲ್ಲು, ಗಳಗಲ್ಲು, ಕ್ಯಾತನಕಲ್ಲು, ಮಡಿವಾಳೆ ಕಲ್ಲು ಅಥವಾ ಅಗಸನ ಕಲ್ಲು ಎಂದು ಕರೆಯುವ, ಒಂದರ ಪಕ್ಕದಂತೆ ನಿಂತ ಮೂರು ಕೂಡುಗಲ್ಲುಗಳಿವೆ.
ಭೇಟಿ ನೀಡಿ








