ಮುತ್ತೂರಾಯಸ್ವಾಮಿ ಬೆಟ್ಟವು ಕರ್ನಾಟಕ ರಾಜ್ಯದ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ಹಾರೋಹಳ್ಳಿ ತಾಲ್ಲೂಕಿನ ಬೆಟ್ಟಹಳ್ಳಿ ಕಾವಲು ಗ್ರಾಮದಲ್ಲಿರುವ ಒಂದು ಸುಂದರ ಬೆಟ್ಟವಾಗಿದೆ. ಸೂರ್ಯೋದಯ ಮತ್ತು ಸೂರ್ಯಾಸ್ತದ ಸೌಂದರ್ಯವನ್ನು ಅನುಭವಿಸಲು ಇಷ್ಟಪಡುವವರಿಗೆ ಈ ಬೆಟ್ಟವು ಭೇಟಿ ನೀಡಲೇಬೇಕಾದ ಸ್ಥಳವಾಗಿದೆ. ಕಾರಿನಲ್ಲಿ ವ್ಯೂ ಪಾಯಿಂಟ್ವರೆಗೆ ತಲುಪಬಹುದು, ಹಾಗೂ ಟ್ರೆಕ್ಕಿಂಗ್ ಅನುಭವಿಸಲು ಬಯಸುವವರಿಗೆ ಈ ಸ್ಥಳವು ಉತ್ತಮ ಆಯ್ಕೆಯಾಗಿದೆ.
ಈ ಬೆಟ್ಟವು ಬೆಂಗಳೂರಿನಿಂದ 42 ಕಿ.ಮೀ, ರಾಮನಗರದಿಂದ ಸುಮಾರು 40 ಕಿ.ಮೀ ಹಾಗೂ ಕನಕಪುರದಿಂದ 29 ಕಿ.ಮೀ ದೂರದಲ್ಲಿದೆ. ಹಾರೋಹಳ್ಳಿ ಮತ್ತು ಕಗ್ಗಲೀಪುರಗಳಿಂದ ಸುಮಾರು 15 ಕಿ.ಮೀ ದೂರದಲ್ಲಿದೆ.
ಬೆಟ್ಟದ ತುದಿಯವರೆಗೆ ಚಾರಣ ಮಾಡಬಹುದು ಅಥವಾ ನಿಮ್ಮ ವಾಹನದಲ್ಲಿಯೇ ಹೋಗಬಹುದು. ರಸ್ತೆಯ ಮೂಲಕ, ಚಾರಣ ಪ್ರಾರಂಭದ ಸ್ಥಳದಿಂದ ಬೆಟ್ಟದ ತುದಿಯವರೆಗೆ ನಡೆದುಕೊಂಡು ಸಹ ಹೋಗಬಹುದು. ಬೆಟ್ಟದ ಮೇಲ್ಭಾಗದಲ್ಲಿ ಮುತ್ತುರಾಯ (ಆಂಜನೇಯ) ದೇವಾಲಯವಿದೆ.
ಭೇಟಿ ನೀಡಿ





