ಬಸವಣ್ಣನವರ ಅರಿವಿನ ಮನೆ ಬಸವಕಲ್ಯಾಣ

ಜಗಜ್ಯೋತಿ ಬಸವಣ್ಣನವರ ಅರಿವಿನ ಮನೆಯು ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನಲ್ಲಿ ಬಸವಣ್ಣನವರು ತ್ರಿವಿಧ ಲಿಂಗ ಪೂಜೆಯಲ್ಲಿ ನಿರತರಾಗಿದ್ದ ಪವಿತವಾದ ಸ್ಥಳವಾಗಿದೆ. ಆದ್ದರಿಂದ ಈ ಸ್ಥಳವು ಅರಿವಿನ ಮನೆ ಎಂದು ಪ್ರಸಿದ್ಧವಾಗಿದೆ. ಬಸವಣ್ಣನವರ ಕಾಲ ಕ್ರಿ.ಶ. 1131 ರಿಂದ 1196 ರವರೆಗೆ.

ಈ ಸ್ಥಳವು ಬೆಂಗಳೂರಿನಿಂದ 749 ಕಿ.ಮೀ (NH50 ಮೂಲಕ), 679 ಕಿ.ಮೀ (NH 44 ಹೈದರಾಬಾದ್ ಮೂಲಕ) ಮತ್ತು ಬೀದರ್ ನಿಂದ 3 ಕಿ.ಮೀ ದೂರದಲ್ಲಿದೆ. ಹಾಗೂ ಬಸವಕಲ್ಯಾಣದಿಂದ 4 ಕಿ.ಮೀ ದೂರದಲ್ಲಿದೆ.

ಬಸವಣ್ಣನವರು ಬೀಜಾಪುರ ಜಿಲ್ಲೆಯ ಬಾಗೇವಾಡಿಯಲ್ಲಿ ಜನಿಸಿದರು. ಮುಂದೆ ಇವರು ಕಪ್ಪಡಿ ಸಂಗಮಕ್ಕೆ ಹೊರಟು ಹೋದರು. ಅಲ್ಲಿ ಗುರುಗಳಾದ ಜಾತವೇದ ಮುನಿಗಳ ಆಶ್ರಯದಲ್ಲಿ ಅವರ ಅನುಗ್ರಹದಿಂದ ಸಕಲ ವಿದ್ಯಾ ಪಾರಂಗತರಾದರು. ಗುರುಗಳ ಆದೇಶದಂತೆ ಕಲ್ಯಾಣಕ್ಕೆ ಬಂದು ಬಲದೇವ ಮಂತ್ರಿಯ ಮಗಳಾದ ಗಂಗಾಂಬಿಕೆಯನ್ನು ಮದುವೆಯಾಗಿ ಕರಣಿಕ ಕಾಯಕವನ್ನುಕೈಗೊಂಡು, ಗೃಹಸ್ಥ ಜೀವನವನ್ನು ನಡೆಸಿದರು. ಒಂದು ಸಲ ಬಿಜ್ಜಳನ ಓಲಗದಲ್ಲಿ ಲಿಪಿಯನ್ನು ಓದಿ ಸಿಂಹಾಸನದ ಕೆಳಗಿದ್ದ ಅರವತ್ತುನಾಲ್ಕು ಹಣ ಧನದನ್ನು ಶೋಧಿಸಿ ಬಿಜ್ಜಳ ದೊರೆಗೆ ಸಿಗುವಂತೆ ಮಾಡಿದರು. ಇವರ ಅಗಾಧವಾದ ಜಾಣತನಕ್ಕೆ ಮೆಚ್ಚಿದ ದೊರೆಯ ಬಸವಣ್ಣನವರಿಗೆ ಮಂತ್ರಿ ಪದವಿಯನ್ನು ಕೊಟ್ಟಿದ್ದಲ್ಲದೆ ತನ್ನ ತಂಗಿಯಾದ ನೀಲಲೋಚನೆಯನ್ನು (ಸಿದ್ಧರಸ ಮಂತಿಯ ಮಗಳು) ಮದುವೆ ಮಾಡಿ ಕೊಟ್ಟನು.

ಇವರ ಸಮರ್ಥ ನೇತೃತ್ವದಲ್ಲಿ ಸಾಮಾಜಿಕ, ಸಾಹಿತ್ಯಿಕ, ಧಾರ್ಮಿಕ ಹಾಗು ಆರ್ಥಿಕ ಕ್ರಾಂತಿಗಳು ಜರುಗಿ ಇತಿಹಾಸದಲ್ಲಿಯೇ ಅತಿ ಅಪೂರ್ವವೆನಿಸಿದ ಅನುಭವ ಮಂಟಪ ವೆಂಬ ಅಧ್ಯಾತ್ಮಿಕ ಮಹಾ ಸಂಸ್ಥೆಯೊಂದು ಜನ್ಮತಾಳಿತು. ವೈರಾಗ್ಯ ನಿಧಿ ಪ್ರಭುದೇವರು ಅಧ್ಯಕ್ಷರಾಗಿದ್ದ ಈ ಅನುಭವ ಮಂಟಪದ ಆಧ್ಯಾತ್ಮಿಕ ಚರ್ಚೆಯಲ್ಲಿ ಭಾಗವಹಿಸಲು ಸ್ತ್ರೀ ಪುರುಷರು ಎಂಬ ಭೇದ ಭಾವವಿರಲಿಲ್ಲ. ಬಸವಣ್ಣನವರ ದೈವೀಶಕ್ತಿಗೆ ಮಾರು ಹೋಗಿ ಕಾಶ್ಮೀರದ ಮಹಾದೇವ ಭೂಪಾಲ, ಅಫಘಾನಿಸ್ತಾನದ ಮರುಳ ಶಂಕರದೇವ , ಬಟ್ಟೆಗಾದೆಯ ಪ್ರದೇವರು, ಸೊನ್ನಲಿಗೆಯ ಸಿದ್ಧರಾಮೇಶ್ವರ, ದೇವರ ಹಿಪ್ಪರಗಿಯ ಮಡಿವಾಳ ಮಾಸಿದೇವೆ ಮೊದಲದ ಶರಣರು ಹಾಗೂ ಉಡುತಡಿಯ ಕಳ್ಳಮಹಾದೇವಿ ಯಕ್ಷ, ಕಾಫೀರದ ಮಹಾದೇವ ಪಾಲಿನ ಪಟ್ಟದ ರಾಣಿಯಾದ ಮಹಾದೇವಿ ಮುಂತಾದ ಶರಣಿಯರು ಆಗಮಿಸಿದ್ದರಿಂದ ಈ ಕಲಲ್ಯಾಣವು ವಿಮುಕ್ತ ಕ್ಷೇಧವರಿಸಿರುತ್ತದೆ.

ಭೇಟಿ ನೀಡಿ
ಬಸವಕಲ್ಯಾಣ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಬೀದರ್ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section