ಮೆಥೋಡಿಸ್ಟ್ ಗುಹೆ ಚರ್ಚ್ ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯ ಬೀದರ್ ತಾಲ್ಲೂಕಿನ ಪಕಲವಾಡದಲ್ಲಿ ಇದೆ. ಅಲ್ಬರ್ಟ್ ಈ. ಕುಕ್ ಬೀದರನಲ್ಲಿ ಮಿಷನರಿಯಾಗಿ ಸೇವೆ ಸಲ್ಲಿಸುತ್ತಿದ್ದಾಗ, 1916ರಲ್ಲಿ ಈ ಚರ್ಚ್ ಅನ್ನು ನಿರ್ಮಿಸಿದರು.
ಈ ಚರ್ಚ್ ಬೆಂಗಳೂರಿನಿಂದ 749 ಕಿ.ಮೀ (NH50 ಮೂಲಕ), 679 ಕಿ.ಮೀ (NH44 – ಹೈದರಾಬಾದ್ ಮೂಲಕ), ಬೀದರ್ ನಿಂದ 3 ಕಿ.ಮೀ ಹಾಗೂ ಬೀದರ್ ರೈಲ್ವೆ ನಿಲ್ದಾಣದಿಂದ 4 ಕಿ.ಮೀ ದೂರದಲ್ಲಿದೆ.
ಮರ್ಜಾಪೂರು ಗ್ರಾಮದ ನಿವಾಸಿಗಳಾಗಿದ್ದ ಶ್ರೀ ಜೋಥಪ್ಪಾರವರು ಹಿಂದು ಸಾಧುಗಳಾಗಿದ್ದು, ಶ್ರೀ ಶಿವಪ್ಪ ಮತ್ತು ಶ್ರೀಮತಿ ಬಾಯಮ್ಮರವರ ಕಿರಿಯ ಮಗನಾಗಿ 27 ನವೆಂಬರ್ 1856 ರಲ್ಲಿ ಜನಿಸಿದರು.
ಕ್ರಿಸ್ತರಲ್ಲ ವಿಶ್ವಾಸಿಯಾಗಿ ಕ್ರೈಸ್ತ ಧರ್ಮವನ್ನು ಸ್ವೀಕರಿಸಿದವರ ಮೂಲ ಆಧ್ಯಾತ್ಮಿಕ ಪ್ರೇರಣಾಕರರು ಅಮೇರಿಕದ ವಂದನೀಯ ರೆವರೆಂಡ್ ಅಲ್ಬರ್ಟ್ ಈ. ಕುಕ್ ಅವರು ಬೀದರನಲ್ಲಿ ಮಿಷನರಿಯಾಗಿ ಸೇವೆ ಸಲ್ಲಿಸುತ್ತಿದ್ದಾಗ, ಶ್ರೀಗಳು ಧರ್ಮಾವಲಂಬಿಯಾಗಿ 2 ಏಪ್ರಿಲ್ 1896 ರಲ್ಲಿ ಧರ್ಮದೀಕ್ಷೆಯನ್ನು ಪಡೆದರು.
ಇವರಲ್ಲಿದ್ದ ದೈವೀಕ ಪ್ರೇರಣೆ ಈ ಗವಿಯನ್ನು ತಮ್ಮ ಬಿಡುವಿನ ವೇಳೆ ಕೊರೆಯಲು ಸ್ಪೂರ್ತಿಯಾಯಿತು. ಹಲವಾರು ವರ್ಷಗಳ ನಿರಂತರ ಭಜನೆ ಮತ್ತು ಆರಾಧನೆಯ ನಂತರ, ಈ ಗವಿಯನ್ನು ದೇವರ ಆಲಯವಾಗಿ 1916ರಲ್ಲಿ ಸಮರ್ಪಿಸಿದರು.
ಬೀದರ ಕ್ರೈಸ್ತ ಜಾತ್ರೆಯನ್ನು ಬೀದರ ನಗರದಲ್ಲಿ ಪ್ರಥಮವಾಗಿ ಪ್ರಾರಂಭಿಸಿದ ರೆವರೆಂಡ್ ಕೆ.ಇ. ಆಂಡರ್ಸನ್ ಅವರಿಗೆ ಈ ಪ್ರಾರ್ಥನಾ ಗವಿಯನ್ನು 1927ರಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು.
ಅಂದಿನಿಂದ, ಪ್ರತಿವರ್ಷವೂ ಈ ದೇವಾಲಯದಲ್ಲಿ ಬೀದರ ಜಾತ್ರಾ ಆರಾಧನೆ ಮತ್ತು ಪುನರುತ್ಥಾನದ ಸೂರ್ಯೋದಯ ಪ್ರಾರ್ಥನೆಯು ಈ ಗವಿಯ ಆವರಣದಲ್ಲಿ ನಡೆಯುತ್ತಿದೆ.
ಭೇಟಿ ನೀಡಿ


