ಗಳಗೇಶ್ವರ ದೇವಸ್ಥಾನವು ಕರ್ನಾಟಕ ರಾಜ್ಯದ ಹಾವೇರಿ ತಾಲ್ಲೂಕಿನಲ್ಲಿರುವ ಒಂದು ಪುಣ್ಯಕ್ಷೆತ್ರ. ಈ ದೇವಾಲಯವು ವರದಾ ಮತ್ತು ತುಂಗಭದ್ರಾ ನದಿಗಳ ಸಂಗಮ ಸ್ಥಳದಲ್ಲಿದೆ. ಗಳಗೇಶ್ವರ ದೇವಸ್ಥಾನವನ್ನು ಗಳಗನಾಥ ದೇವಾಲಯ ಎಂದೂ ಕರೆಯಲ್ಪಡುವ ಈ ದೇವಾಲಯವು ಗಳಗನಾಥ ಎಂಬ ಸಣ್ಣ ಹಳ್ಳಿಯಲ್ಲಿದೆ, ಈ ಗ್ರಾಮವು ಚಾಲುಕ್ಯರ ಆಳ್ವಿಕೆಯಲ್ಲಿ ನಿರ್ಮಿಸಲಾದ ದೇವಾಲಯಕ್ಕೆ ಹೆಸರುವಾಸಿಯಾಗಿದೆ. ಇದರ ಶಿಲ್ಪಗಳು ಮತ್ತು ಸಂಕೀರ್ಣವಾದ ಕೆತ್ತನೆಗಳೊಂದಿಗೆ ಸುಂದರ ಶಿವ ದೇವಾಲಯವಾಗಿದೆ.
ಈ ದೇವಾಲಯವು ಬೆಂಗಳೂರಿನಿಂದ ಸುಮಾರು 344 ಕಿ.ಮೀ ಮತ್ತು ಹುಬ್ಬಳಿಯಿಂದ 117 ಕಿ.ಮೀ ದೂರದಲ್ಲಿದೆ. ಹಾಗೂ ಹಾವೇರಿ ನಗರದಿಂದ 41 ಕಿ.ಮೀ ಮತ್ತು ಹಾವೇರಿ ರೈಲ್ವೆ ನಿಲ್ದಾಣದಿಂದ 40 ಕಿ.ಮೀ ದೂರದಲ್ಲಿದೆ.
ಇಲ್ಲಿರುವ ಗಳಗೇಶ್ವರ ದೇವಾಲಯವನ್ನು ಗಳಗೇಶ್ವರ ಮುನಿ ಸ್ಥಾಪಿಸಿದರೆಂದು ಪ್ರತೀತಿ. ಈ ದೇವಾಲಯ 28 ಮೀ ಉದ್ದ ಮತ್ತು 14 ಮೀ ಅಗಲವಿದೆ. ಇದರ ಮೇಲ್ಚಾವಣಿಯನ್ನು ನಾಲ್ಕು ಸುಂದರವಾದ ಸ್ತಂಭಗಳು ಅಂದವಾಗಿ ಎತ್ತಿ ಹಿಡಿದಿವೆ. ದೇವಾಲಯದ ಸುತ್ತಲೂ ಗೋಡೆಯ ಮೇಲೆ ಪೌರಾಣಿಕ ಕಥೆಗಳನ್ನು ಕೆತ್ತಲಾಗಿದೆ. ಈ ದೇವಾಲಯದ ಕಟ್ಟಡದ ವೈಶಿಷ್ಟ್ಯವೆಂದರೆ ಇದರ ಅಡಿಪಾಯ. ಇದರ ಆಕಾರ ಪಿರಮಿಡ್ ನಂತಿದೆ ಮತ್ತು ನದಿಯ ನೆರೆಹಾವಳಿಯಿಂದ ಈ ದೇವಾಲಯವನ್ನು ರಕ್ಷಿಸಲು ಗೋಡೆಗಳನ್ನು ಕಟ್ಟಲಾಗಿದೆ. ಇಲ್ಲಿ ಒಂದು ಹನುಮಂತದೇವರ ಗುಡಿಯೂ ಇದೆ. ಈ ಊರಲ್ಲಿ ಕಲ್ಯಾಣ ಚಾಳುಕ್ಯರ ಆರು ಶಾಸನಗಳು ದೊರೆತಿವೆ. ಹೊಯ್ಸಳ ವಿಷ್ಣುವರ್ಧನ ಇಲ್ಲಿಂದ ದಾನಮಾಡಿದ ಸಂಗತಿ ತಿಳಿದುಬರುತ್ತದೆ. ಈ ಗ್ರಾಮದ ಸಮೀಪದಲ್ಲಿ ಅನೇಕ ಬೃಹತ್ ಶಿಲಾ ಸಮಾಧಿಗಳು ಬೆಳಕಿಗೆ ಬಂದಿವೆ. ಇದು ಆ ಯುಗದ ಸಂಗೀತ ಮತ್ತು ನೃತ್ಯದ ಬಗ್ಗೆ ಮಾತನಾಡುವ ದೊಡ್ಡ ಶಾಸನಗಳನ್ನು ಹೊಂದಿದೆ.
ಈ ದೇವಾಲಯವು ಪ್ರಧಾನ ದೇವತೆ ಶಿವನಿಗೆ ಮತ್ತು ಕೆತ್ತನೆಗಳು ಮತ್ತು ವಾಸ್ತುಶಿಲ್ಪಗಳೊಂದಿಗೆ ಬಹಳ ಹೆಸರುವಾಸಿಯಾಗಿದೆ. ದೇವಾಲಯವು ಅದರ ಆದರ್ಶ ಸ್ಥಳದ ಕಾರಣದಿಂದಾಗಿ ವಿಶಿಷ್ಟವಾಗಿದೆ, ಅಂದರೆ ತುಂಗಾ ಭದ್ರಾ ಮತ್ತು ವರದಾ ಎಂಬ ಎರಡು ನದಿಗಳ ಸಂಗಮದಲ್ಲಿದೆ. ನದಿಯ ಉಪಸ್ಥಿತಿಯಿಂದಾಗಿ ಈ ಸ್ಥಳವನ್ನು ಪವಿತ್ರವೆಂದು ಪರಿಗಣಿಸಲಾಗಿದೆ. ತುಂಗಭದ್ರಾ ನದಿಯ ಪವಿತ್ರ ನೀರಿನಲ್ಲಿ ಸ್ನಾನವನ್ನು ಮಂಗಳಕರವೆಂದು ಪರಿಗಣಿಸಲಾಗಿದೆ.
ಈ ದೇವಾಲಯವನ್ನು 11 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಮತ್ತು ದೇವಾಲಯವು ಅದರ ಕೆತ್ತನೆಗಳು ಮತ್ತು ಶಿಲ್ಪಗಳೊಂದಿಗೆ ಶ್ರೀಮಂತ ಚಾಲುಕ್ಯರ ರಾಜ ವಿಕ್ರಮಾದಿತ್ಯ ವಿಜೃಂಭಣೆಯನ್ನು ಪ್ರತಿಬಿಂಬಿಸುತ್ತದೆ. ಗೋಪುರವನ್ನು ವಿವಿಧ ವಾಸ್ತುಶಿಲ್ಪದ ಅಂಶಗಳು ಮತ್ತು ಉತ್ತಮವಾದ ಅಲಂಕಾರಗಳಲ್ಲಿ ಸೊಗಸಾಗಿ ಅಲಂಕರಿಸಲಾಗಿದೆ.
ಶಾಸನಗಳಲ್ಲಿ ಈ ಸ್ಥಳವನ್ನು ಹುಲ್ಲುನಿ ಅಥವಾ ಪುಲ್ಲುನಿ ಎಂದು ಉಲ್ಲೇಖಿಸಲಾಗಿದೆ. ಇಲ್ಲಿರುವ ದೇವಾಲಯ ಪೂರ್ವಾಭಿಮುಖವಾಗಿದ್ದು ಗರ್ಭಗೃಹ, ಅಂತರಾಳ ಹಾಗು ಮುಖ ಮಂಟಪಗಳನ್ನು ಹೊಂದಿದೆ. ದೇವಾಲಯವು ನದಿ ದಂಡೆಯ ಮೇಲಿರುವುದರಿಂದ ಹಾಗು ಗರ್ಭಗೃಹದ ಮೇಲಿನ ಗೋಪುರ ಬೃಹತ್ತಾದ್ದರಿಂದ ಅದರ ಸುರಕ್ಷತೆತೆಗಾಗಿ ದೇವಾಲಯದ ಸುತ್ತಲೂ ಪಿರಮಿಡ್ ಗೋಪುರ ಆಕರವಾಗಿ ಬಲವಾದ ಗೋಡೆಯನ್ನು ಕಟ್ಟಲಾಗಿದೆ.
ಗರ್ಭಗೃಹದ ಸ್ಪರ್ಶ ಲಿಂಗ ಎಂದು ಕರೆಯಲ್ಪಡುವ ಲಿಂಗವನ್ನು ಹೊಂದಿದೆ ಮತ್ತು ಮುಚ್ಚಿದ ಸಭಾಂಗಣದಲ್ಲಿ ಪೂರ್ವಾಭಿಮುಖವಾಗಿದೆ. ಇಲ್ಲಿ ಅನೇಕ ಸುಂದರ ಕೆತ್ತನೆಗಳಿವೆ ಚಾಲುಕ್ಯರ ಶೈಲಿಯನ್ನು ಹೋಲುತ್ತದೆ. ಅಂಥವುಗಳಲ್ಲೊಂದು ಸೂರ್ಯ ವಿಗ್ರಹ. ಕೈಯಲ್ಲಿ ಕಮಲವನ್ನು ಹಿಡಿದಿದ್ದು ಸಪ್ತಾಶ್ವಗಳ ಮೇಲೆ ಆರೂಢನಾಗಿದ್ದಾನೆ. ಉಷೆ-ಪ್ರತ್ಯುಷೆಯರು ಮಕರ ತೋರಣದಲ್ಲಿ ಇದ್ದಾರೆ. ಇದಲ್ಲದೆ ಎಂಟು ಕೈಗಳ ಮಹಿಷನನ್ನು ಕೊಲ್ಲುವ ಭಂಗಿಯಲ್ಲಿರುವ ಮಹಿಷಾಸುರ ಮರ್ದಿನಿ, ನಿಂತ ಭಂಗಿಯಲ್ಲಿರುವ ವಿಷ್ಣು, ಇದರ ಸುತ್ತಲೂ ಕೆತ್ತಿರುವ ದಶಾವತಾರ ಶಿಲ್ಪಗಳು ಹಾಗು ಇಲ್ಲಿನ ಅತ್ಯಂತ ಆಕರ್ಷಕ ಶಿಲ್ಪಗಳೊಲ್ಲೊಂದಾದ ಸರಸ್ವತಿ.
ಭೇಟಿ ನೀಡಿ




