ಹೆಗ್ಗೇರಿ ಕೆರೆಯು ಕರ್ನಾಟಕ ರಾಜ್ಯದ ಹಾವೇರಿ ಜಿಲ್ಲೆಯಲ್ಲಿ ಇರುವ ಐತಿಹಾಸಿಕ ಹೆಗ್ಗೇರಿ ಕೆರೆ. ಈ ಕೆರೆಯು ಕರ್ನಾಟಕ ರಾಜ್ಯದ ದೊಡ್ಡ ಕೆರೆಗಳಲ್ಲಿ ಇದು ಒಂದಾಗಿದೆ. ಈ ಕೆರೆಯು ಹಾವೇರಿ ಜಿಲ್ಲೆಯ ಒಂದು ಪ್ರವಾಸಿ ಸ್ಥಳವಾಗಿ ಮಾರ್ಪಟ್ಟಿದೆ.
ಈ ಕೆರೆಯು ಬೆಂಗಳೂರಿನಿಂದ ಸುಮಾರು 422 ಕಿ.ಮೀ ಮತ್ತು ಹಾವೇರಿ ನಗರದಿಂದ 05 ಕಿ.ಮೀ ದೂರದಲ್ಲಿದೆ. ಹಾಗೂ ಹಾವೇರಿ ರೈಲ್ವೆ ನಿಲ್ದಾಣದಿಂದ 07 ಕಿ.ಮೀ ದೂರದಲ್ಲಿದೆ.
ಹೆಗ್ಗೇರಿ ಕೆರೆಯು ಕರ್ನಾಟಕ ರಾಜ್ಯದ ಸಣ್ಣ ನೀರಾವರಿ ಇಲಾಖೆಯ ಒಡೆತನದಲ್ಲಿದೆ. ಇತಿಹಾಸದ ಪ್ರಕಾರ, 1134 ರಲ್ಲಿ ರಾಜ ನಾಲಾ ಈ ಸರೋವರವನ್ನು ನಿರ್ಮಿಸಿದನು. ಸರೋವರವು ನಾಲ್ಕು ಹಳ್ಳಿಗಳಿಂದ ಆವೃತವಾಗಿದೆ. ಇದು ತುಂಬಿದಾಗ ನೀರಿನ ಆಳವು 12 ಅಡಿಗಳಷ್ಟಿರುತ್ತದೆ. ಸುಮಾರು 683 ಎಕರೆ ವಿಸ್ತೀರ್ಣದ ಈ ಕೆರೆಯು ಸುಮಾರು 600 ಎಕರೆ ಫಲವತ್ತಾದ ಭೂಮಿಗೆ ನೀರಾವರಿ ಮೂಲವಾಗಿದೆ. ಅದರ ಗಾತ್ರದಲ್ಲಿ, ಈ ಸರೋವರವು ಕರ್ನಾಟಕದ ದೊಡ್ಡ ಕೆರೆಗಳಲ್ಲಿ ಒಂದಾಗಿದೆ.
ಭೇಟಿ ನೀಡಿ

