ಪಂಚಕೂಟ ಬಸದಿ ಕಂಬದಹಳ್ಳಿ | ಕಂಬದಹಳ್ಳಿ ಜೈನ ದೇವಾಲಯ

ಕಂಬದಹಳ್ಳಿ ಪಂಚಕೂಟ ಬಸದಿಯು ಕರ್ನಾಟಕ ರಾಜ್ಯದ ತುಮುಕೂರು ಜಿಲ್ಲೆಯ ನಾಗಮಂಗಲ ತಾಲ್ಲೂಕಿನಲ್ಲಿರುವ ಜೈನರ ಒಂದು ಪವಿತ್ರ ಯಾತ್ರಾ ಸ್ಥಳವಾಗಿದೆ. ಇಲ್ಲಿ ಜೈನರ ಪಂಚಕೂಟ ಬಸದಿ ಇದ್ದು, ಕಂಬದಹಳ್ಳಿ ಒಂದು ಪ್ರಾಚೀನ ಜೈನ ಕ್ಷೇತ್ರವಾಗಿದೆ. ಇಲ್ಲಿ ಪಂಚಕೂಟ ಬಸದಿಯ ಬಳಿ ಇರುವ 50 ಅಡಿ ಎತ್ತರದ ಬ್ರಹ್ಮದೇವರ ಕಂಬದಿಂದಾಗಿ ಈ ಗ್ರಾಮಕ್ಕೆ ಈ ಹೆಸರು ಬಂದಿದೆ.

ಕಂಬದಹಳ್ಳಿ ಪಂಚಕೂಟ ಬಸದಿಯು ಬೆಂಗಳೂರಿಂದ 128 ಕಿಲೋಮೀಟರ್ ದೂರದಲ್ಲಿದೆ ಮತ್ತು ಮಂಡ್ಯ ದಿಂದ 60 ಕಿಲೋಮೀಟರ್ ದೂರದಲ್ಲಿದೆ ಹಾಗೂ ನಾಗಮಂಗಲದಿಂದ 17 ಕಿಲೋಮೀಟರ್ ದೂರದಲ್ಲಿದೆ.

ಕಂಬದಹಳ್ಳಿ ಗಂಗವಾಡಿ ಪ್ರಾಂತ್ಯದ ಒಂದು ಊರಾಗಿತ್ತು. ನಂತರ ಹೊಯ್ಸಳ, ವಿಜಯನಗರ ಅರಸರ ಆಳ್ವಿಕೆಗೆ ಒಳಪಟ್ಟಿತು. ಈ ಗ್ರಾಮದ ಪಂಚಕೂಟ ಬಸದಿಒಂದು ಅದ್ವಿತೀಯ ಜೈನ ಸ್ಮಾರಕ. ಕ್ರಿಸ್ತಶಕ 900 ರ ಸುಮಾರಿನಲ್ಲಿ, ಗಂಗರ ಆಳ್ವಿಕೆಯಲ್ಲಿ ತ್ರಿಕೂಟಾಚಲವಾದ ಆದಿನಾಥ ಬಸದಿ ನಿರ್ಮಾಣವಾಯಿತು. ಕಣಶಿಲೆಯಲ್ಲಿ ನಿರ್ಮಿತವಾದ ಈ ಬಸದಿ ದ್ರಾವಿಡ ಶೈಲಿಯಲ್ಲಿದೆ. ಈ ತ್ರಿಕೂಟ ಆಲಯಕ್ಕೆ ಹೊಯ್ಸಳರ ಕಾಲದಲ್ಲಿ ಇನ್ನೆರಡು ಗುಡಿಗಳನ್ನು ಸೇರಿಸಿ ಪಂಚಕೂಟ ಆಲಯವಾಗಿ ಮಾರ್ಪಡಿಸಲಾಯಿತು. ಮೂಲ ದೇವಾಲಯದಲ್ಲಿ ಒಂದೇ ವಿಸ್ತೀರ್ಣದ ಮೂರು ಗರ್ಭಗೃಹಗಳಿವೆ. ಇವುಗಳಲ್ಲಿ ಮಧ್ಯದ ಗುಡಿ ಉತ್ತರಕ್ಕೆ ಮುಖ ಮಾಡಿದೆ. ಇದರ ಮುಂಭಾಗದಲ್ಲಿ ಒಂದಕ್ಕೊಂದು ಎದುರಾಗಿ ಪೂರ್ವ ಪಶ್ಚಿಮಗಳಲ್ಲಿ ಒಂದೊಂದು ಗುಡಿಗಳಿವೆ. ಎಲ್ಲಾ ಗುಡಿಗಳಿಗೂ ಒಂದೊಂದು ಪ್ರತ್ಯಕ್ಷ ಅರ್ಧ ಮಂಟಪವಿದೆ. ನವರಂಗಕ್ಕೆ ತೆರೆದಿವೆ, ನವರಂಗದಲ್ಲಿ ನಾಲ್ಕು ಕಂಬಗಳಿವೆ ಹಾಗೂ ನವರಂಗದ ಮುಂದುಗಡೆ ಒಂದು ಮುಖಮಂಟಪವಿದೆ. ನಂತರ ಸೇರ್ಪಡೆಯಾದ ಎರಡು ಗುಡಿಗಳು ಮುಂಭಾಗದಲ್ಲಿ ಪೂರ್ವ ಪಶ್ಚಿಮವಾಗಿ ಮೂಲ ದೇಗುಲಕ್ಕೆ ಲಂಬವಾಗಿ ನಿರ್ಮಿತವಾಗಿದೆ. ಎರಡು ಗುಡಿಗಳಿಗೂ ಒಂದೊಂದು ಅರ್ಧ ಮಂಟಪ ಮತ್ತು ಒಂದೊಂದು ನವರಂಗಗಳಿವೆ. ನವರಂಗಗಳ ಮುಂದಿನ ತೆರೆದ ಮಂಟಪ ಇವೆರಡು ಗುಡಿಗಳನ್ನು ಕೂಡಿದೆ. ದೇಗುಲದ ಉತ್ತರದಲ್ಲಿ ದ್ವಾರ ಮಂಡಲವಿದೆ. ಮೂಲ ಗುಡಿಯ ದಕ್ಷಿಣ ಗರ್ಭಗೃಹದಲ್ಲಿ ಆದಿನಾಥ ,ಪೂರ್ವದಲ್ಲಿ ನೇಮಿನಾಥ , ಪಶ್ಚಿಮದಲ್ಲಿ ಶಾಂತಿನಾಥ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಎಲ್ಲಾ ಶಿಲ್ಪಗಳಿಗೂ ವಿವರವಾಗಿ ಪೀಠಗಳಿವೆ. ಬಸದಿಯಲ್ಲಿ ಗಂಗಾ ಹೊಯ್ಸಳ ಕಾಲದ ಯಕ್ಷ ಯಕ್ಷಿಣಿಯರ ಶಿಲ್ಪಗಳಿವೆ. ಹೊಯ್ಸಳ ಕಾಲದ ಮುಂದಿನ ಎರಡು ಗರ್ಭಗೃಹದಲ್ಲಿ ಒಂದೊಂದು ಜೀನ ಬಿಂಬಗಳಿವೆ. ಬಸದಿಯ ಹೊರ ಅಲಂಕಾರವು ಸಂಪೂರ್ಣ ದ್ರಾವಿಡ ಮಾದರಿಯಲ್ಲಿದೆ.

ಭೇಟಿ ನೀಡಿ
ನಾಗಮಂಗಲ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಮಂಡ್ಯ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section