ಮೇಲುಕೋಟೆ ಗುಹೆ ದೇವಾಲಯ

ಮೇಲುಕೋಟೆಯ ಗುಹಾಂತರ ದೇವಾಲಯವು ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕು ಮೇಲುಕೋಟೆಯಲ್ಲಿ ಗುಹಾ ದೇವಾಲಯವಾಗಿದೆ. ಬಾದಾಮಿ ಮತ್ತು ಇತರ ಗುಹಾ ದೇವಾಲಯಗಳಂತೆಯೇ. ಮೇಲುಕೋಟೆಯಲ್ಲಿರುವ ಈ ಗುಹಾಂತರ ದೇವಾಲಯವು ಕಲ್ಲಿನ ಕೆತ್ತನೆಯ ಮೂಲ ರೂಪವಾಗಿದ್ದು, ಅದರಲ್ಲಿ ಕೆಲವು ಸ್ತಂಭಗಳ ಜೊತೆಗೆ ಒಂದು ಗುಹೆಯನ್ನು ನಿರ್ಮಿಸಲಾಗಿದೆ.

ಮೇಲುಕೋಟೆಯ ಗುಹಾಂತರ ದೇವಾಲಯವು ಬೆಂಗಳೂರಿನಿಂದ ಸುಮಾರು 141ಕಿ.ಮೀ ದೂರದಲ್ಲಿದೆ. ಮಂಡ್ಯ ನಗರದಿಂದ ಸುಮಾರು 39 ಕಿ.ಮೀ ದೂರದಲ್ಲಿದೆ ಹಾಗೂ ಮೈಸೂರುನಗರ ದಿಂದ ಕೇವಲ 56 ಕಿ.ಮೀ ದೂರದಲ್ಲಿದೆ. ಪಾಂಡವಪುರವು ಹತ್ತಿರದ ರೈಲು ನಿಲ್ದಾಣವಾಗಿದ್ದು ಅದು ಕೇವಲ 30 ಕಿ.ಮೀ ದೂರದಲ್ಲಿದೆ.

ಭೇಟಿ ನೀಡಿ
ಪಾಂಡವಪುರ ಇತರೆ ಪ್ರವಾಸಿ ಸ್ಥಳಗಳು


ಭೇಟಿ ನೀಡಿ
ಮಂಡ್ಯ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು