ಸೌಮ್ಯಕೇಶವ ದೇವಾಲಯ ನಾಗಮಂಗಲ

ಸೌಮ್ಯಕೇಶವ ದೇವಾಲಯವು ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ನಾಗಮಂಗಲ ದಲ್ಲಿದೆ. ಈ ದೇವಾಲಯವನ್ನು ಹೊಯ್ಸಳ ಮತ್ತು ವಿಜಯನಗರ ಅರಸರ ಕಾಲದಲ್ಲಿ ಹಂತ ಹಂತವಾಗಿ ನಿರ್ಮಾಣವಾಗಿದ್ದು, ಈ ದೇವಾಲಯವು ಗೋಪುರ, ಗರ್ಭಗೃಹ, ಪ್ರದಕ್ಷಿಣಾಪಥ ಮತ್ತು ಪಾತಾಳ ಅಂಕಣವನ್ನು ಹೊಂದಿದೆ. ಈ ದೇಗುಲದ ಶಿಖರ ನಮ್ಮ ರಾಜ್ಯದ ಎತ್ತರದ ಶಿಖರ ಹೊಂದಿರುವ ದೇವಾಲಯಗಳಲ್ಲಿ ಒಂದಾಗಿದ್ದು, ಈ ಆಲಯದ ಗೋಪುರವನ್ನು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ನಿರ್ಮಿಸಲಾಗಿದೆ. ನಕ್ಷತ್ರ ಆಕಾರ ಜಗತಿಯ ಮೇಲೆ ನಿರ್ಮಿತವಾದ ಈ ದೇವಾಲಯವು ತ್ರಿಕೂಟಾಚಲ ರಚನೆಯಂತೆ ಈ ಕ್ಷೇತ್ರದ ಮುಂದೆ ದೇವರಾಗಿ ಸೌಮ್ಯ ಕೇಶವ ಆರಾಧಿಸಲ್ಪಡುತ್ತಿದ್ದಾರೆ.

ಸೌಮ್ಯಕೇಶವ ದೇವಾಲಯವು ಬೆಂಗಳೂರಿನಿಂದ ಸುಮಾರು 120 ಕಿ.ಮೀ ದೂರದಲ್ಲಿದೆ. ಮಂಡ್ಯ ನಗರದಿಂದ ಸುಮಾರು 43 ಕಿ.ಮೀ ದೂರದಲ್ಲಿದೆ ಹಾಗೂ ನಾಗಮಂಗಲ ದಿಂದ ಕೇವಲ 01 ಕಿ.ಮೀ ದೂರದಲ್ಲಿದೆ.

ಇಲ್ಲಿನ ಕೇಶವನ ವಿಗ್ರಹವು ಸೌಮ್ಯವಾದ ಮುಖವನ್ನು ಹೊಂದಿರುವುದರಿಂದ, ಎಲ್ಲಿ ನೆಲೆಸಿರುವ ಪರಮಾತ್ಮನನ್ನು ಸೌಮ್ಯ ಕೇಶವ ಎಂದು ಕರೆಯಲಾಗುತ್ತದೆ. ಬೇರೆಲ್ಲಾ ಕೇಶವನ ದೇಗುಲಗಳಲ್ಲಿ ಸ್ವಾಮಿಯು ಬಲಗೈಯಲ್ಲಿ ಚಕ್ರ ಎಡಗೈಯಲ್ಲಿ ಶಂಖವನ್ನು ಹಿಡಿದು ಭಕ್ತರಿಗೆ ದರ್ಶನವನ್ನು ನೀಡಿದರೆ. ಆದರೆ ಇಲ್ಲಿ ಸ್ವಾಮಿಯು ಬಲಗೈಯಲ್ಲಿ ಶಂಖ ಎಡಗೈಯಲ್ಲಿ ಚಕ್ರವನ್ನು ಹಿಡಿದು ಶ್ರೀದೇವಿ ಭೂದೇವಿ ಸಮೇತ ನಾಗಿ ಭಕ್ತರಿಗೆ ದರ್ಶನವನ್ನು ನೀಡುತ್ತಿದ್ದಾನೆ.

ಭೇಟಿ ನೀಡಿ
ನಾಗಮಂಗಲ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಮಂಡ್ಯ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section