ಜಯಮಂಗಲಿ ಕೃಷ್ಣಮೃಗ ಸಂರಕ್ಷಣಾ ಮೀಸಲು ಪ್ರದೇಶವು ಇದು ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕು ಮೈದನಹಳ್ಳಿ ಇದೆ . ಈ ಪ್ರದೇಶ ಕರ್ನಾಟಕದ ಡೆಕ್ಕನ್ ಪ್ರಸ್ಥಭೂಮಿಯ ಬಯಲು ಪ್ರದೇಶದ ಒಂದು ಭಾಗವಾಗಿದೆ. ಈ ಪ್ರದೇಶದಲ್ಲಿ ಅತಿ ಹೆಚ್ಚು ಕೃಷ್ಣಮೃಗ ಕಂಡುಬರುತ್ತದೆ.
ಜಯಮಂಗಲಿ ಕೃಷ್ಣಮೃಗ ಸಂರಕ್ಷಣಾ ಮೀಸಲು ಇದು ಬೆಂಗಳೂರಿನಿಂದ 118 ಕಿ.ಮೀ ದೂರದಲ್ಲಿದೆ. ತುಮಕೂರು ಜಿಲ್ಲೆಯಿಂದ 60 ಕಿ.ಮೀ ದೂರದಲ್ಲಿದೆ ಮತ್ತು ಮಧುಗಿರಿ ತಾಲೂಕಿನಿಂದ 47 ಕಿ.ಮೀ ದೂರದಲ್ಲಿದೆ.
ಈ ಸಂರಕ್ಷಣಾ ಮೀಸಲು ಪ್ರದೇಶಕ್ಕೆ ಭೇಟಿ ನೀಡಲು ಸೆಪ್ಟೆಂಬರ್ ತಿಂಗಳಿನಿಂದ ಡಿಸೆಂಬರ್ ತಿಂಗಳ ವರೆಗೆ ಸೂಕ್ತ ಸಮಯವಾಗಿರುತ್ತದೆ.
ಈ ಸಂರಕ್ಷಣಾ ಮೀಸಲು ಪ್ರದೇಶಕ್ಕೆ ಪ್ರತಿದಿನ ಬೆಳಿಗ್ಗೆ 6:00 ರಿಂದ ಸಂಜೆ 6:00 ವರೆಗೆ ಭೇಟಿ ನೀಡಲು ಸೂಕ್ತ ಸಮಯವಾಗಿದೆ. ಇಲ್ಲಿ ಪ್ರವೇಶ ಶುಲ್ಕವು ಪ್ರತಿ ವ್ಯಕ್ತಿಗೆ Rs.100/- ಇರುತ್ತದೆ ಹಾಗು ಕ್ಯಾಮರಾ ಶುಲ್ಕವು Rs.50/- ನಿಗದಿಪಡಿಸಲಾಗಿದೆ.
1992 ರಲ್ಲಿ ಈ ಪ್ರದೇಶದ ಅಧಿಕಾರ ವ್ಯಾಪ್ತಿಯನ್ನು ಕಂದಾಯ ಇಲಾಖೆಗೆ ವರ್ಗಾವಣೆ ಗೊಳಿಸಲಾಯಿತು. 1997 ರಲ್ಲಿ ಈ ಪ್ರದೇಶವನ್ನು ಸಂರಕ್ಷಣಾ ಮೀಸಲು ಎಂದು ಘೋಷಿಸಲು ಪ್ರಸ್ತಾಪಿಸಲಾಯಿತು ಮತ್ತು ಇದನ್ನು ಅಂತಿಮವಾಗಿ 2007 ರಲ್ಲಿ ಮೀಸಲು ಪ್ರದೇಶ ಎಂದು ಘೋಸಿಸಸಲಾಯಿತು. ಈ ಪ್ರದೇಶದಲ್ಲಿ 993 ಎಕರೆಗಳಲ್ಲಿ 893 ಎಕರೆ ಪ್ರದೇಶವನ್ನು ಸಂರಕ್ಷಣಾ ಮೀಸಲು ಎಂದು ಘೋಷಿಸಲಾಯಿತು.
ಇಲ್ಲಿ ಸುಮಾರು 26 ಜಾತಿಯ ಸರಿಸೃಪಗಳು ಮತ್ತು 14 ಬಗೆಯ ಹಾವುಗಳಿವೆ. ಈ ಮೀಸಲು ಪ್ರದೇಶದಲ್ಲಿ 125 ಪಕ್ಷಿ ಪ್ರಭೇದಗಳಿವೆ. ಈ ಪ್ರದೇಶದಲ್ಲಿ ಕೃಷ್ಣಮೃಗ ಹೊರತಾಗಿ 67 ವಿವಿಧ ಚಿಟ್ಟೆಗಳು ಮತ್ತು ಸಸ್ತನಿಗಳು ಕಂಡುಬಂದಿವೆ.
ಭೇಟಿ ನೀಡಿ