ಮಿಡಿಗೇಶಿ ಕೋಟೆಯು ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನಲ್ಲಿ ತಾಲೂಕಿನಲ್ಲಿ ಇರುವ ಒಂದು ಐತಿಹಾಸಿಕ ಕೋಟೆಯಾಗಿದೆ. 14ನೇ ಶತಮಾನದಲ್ಲಿ ಈ ಮಿಡಿಗೇಶಿ ಯು ಅತ್ಯಂತ ಶ್ರೀಮಂತ ಮತ್ತು ಅತ್ಯಂತ ಬಲಿಷ್ಠವಾದ ಹೊಂದಿರುವಂತ ಒಂದು ಪಾಳೆಪಟ್ಟು ಹಾಗು ಈ ಬೆಟ್ಟದ ಮೇಲೆ ಕೋಟೆಯನ್ನು ಕಟ್ಟಿಸಿದವರು ನಾಗರೆಡ್ಡಿ.
ಈ ಕೋಟೆಯು ಬೆಂಗಳೂರಿಂದ ಸುಮಾರು 125 ಕಿ.ಮೀ ಮತ್ತು ತುಮಕೂರಿನಿಂದ 68 ಕಿ.ಮೀ ದೂರದಲ್ಲಿದೆ. ಹಾಗೂ ಮಧುಗಿರಿಯಿಂದ ಕೇವಲ 23 ಕಿ.ಮೀ ದೂರದಲ್ಲಿದೆ.
14ನೇ ಶತಮಾನದಲ್ಲಿ ಈ ಮಿಡಿಗೇಶಿ ಯು ಅತ್ಯಂತ ಶ್ರೀಮಂತ ಮತ್ತು ಅತ್ಯಂತ ಬಲಿಷ್ಠವಾದ ಹೊಂದಿರುವಂತ ಒಂದು ಪಾಳೆಪಟ್ಟು. ನಲ್ಲೊಬ ನಾಯಕ ಈತ ಇಲ್ಲಿ ಅತ್ಯಂತ ಬಲಿಷ್ಠ ಪಾಳೇಗಾರ ನಾಗಿ ಬೆಳೆಯುತ್ತಾನೆ ಮತ್ತು ಮಿಡಿಗೇಶಿ ಯನ್ನು ಶ್ರೀಮಂತ ರಾಜ್ಯವಾಗಿ ಬೆಳೆಸಿರಿತಾನೆ. ಇದನ್ನು ಕಂಡಂತಹ ವಿಜಯನಗರದ ಸಳಾವ ನರಸಿಂಹ ನಾಯಕನ ಮೇಲೆ ಯುದ್ಧ ಸಾರುತ್ತಾನೆ ಹಾಗೂ ನಾಯಕನನ್ನು ಮೋಸದಿಂದ ಸಾಯಿಸುತ್ತಾನೆ. ಇದೆಲ್ಲವೂ ನಡೆದಿದ್ದು 1486 ಮತ್ತು 1991ರ ನಡುವೆ. ನಂತರ ಇಲ್ಲಿನ ಪಾಳೇಗಾರನಾಗಿ ಆಡಳಿತ ನಡೆಸಿದ್ದು ಪರಸು ರಾವತ. ಈತನ ನಂತರದ ಪಾಳೇಗಾರರಾಗಿದ್ದರು ನಾಗರೆಡ್ಡಿ. ಈ ನಾಗರೆಡ್ಡಿ ಹೆಂಡತಿಯೇ ಮಿಡಿಗೇಶಿ. ಈ ನಾಗರೆಡ್ಡಿ ಹೆಂಡತಿಗೆ ಮುಡಿ ಮುಟ್ಟುವವರೆಗೂ ತಲೆ ಕೂದಲು ಇತ್ತೆಂದು, ಆದ್ದರಿಂದ ನಾಗರೆಡ್ಡಿಯು ತನ್ನ ಹೆಂಡತಿಯ ಮೇಲಿನ ಪ್ರೀತಿಗಾಗಿ ಈ ಊರಿಗೆ ಮೆಡಿಗೇಶಿ ಎಂದು ಹೆಸರಿಡುತ್ತಾನೆ.
ಸ್ವಲ್ಪ ವರ್ಷಗಳ ನಂತರ ಮಿಡಿಗೇಶಿಯನ್ನು ಪಕ್ಕದ ಪಾಳೇಪಟ್ಟಿನ ಪಾಳೆಗಾರನದಂತ ಚಿಕ್ಕಪ್ಪ ಗೌಡ ವಶಪಡಿಸಿಕೊಳ್ಳುತ್ತಾನೆ. ನಂತರದ ಕಾಲದಲ್ಲಿ ಹೈಯರ್ ಅಲಿಯು ಈ ಕೋಟೆಯನ್ನು ಆಡಳಿತದ ಮೇಲೆ ಹಿಡಿತ ಸಾದಿಸಿ ಆಡಳಿತ ಕಡಿಮೆ ಮಾಡುತ್ತಾನೆ. ಆಗ ಈ ಚಿಕ್ಕಪ್ಪ ಗೌಡ ವಂಶಸ್ಥರು ಇಲ್ಲಿದ್ದ ಪಲಾಯನ ಮಾಡುತ್ತಾರೆ.
ನಂತರದ ಕಾಲದಲ್ಲಿ ಮರಾಠರು ವಶಪಡಿಸಿಕೊಳ್ಳುತ್ತಾರೆ. 1991 ರಲ್ಲಿ ಬ್ರಿಟಿಷ್ ಅಧಿಕಾರಿ ಲಾರ್ಡ್ಸ್ ಕರ್ನವಾಲಿಸ್ ಆಕ್ರಮಣ ಮಾಡಲು ಬರುವ ಸಮಯದಲ್ಲಿ ಸಮಯದಲ್ಲಿ ಈ ಹಿಂದೆ ಪಾಳೇಗಾರನಾಗಿದ್ದ ಚಿಕ್ಕಪ್ಪ ಗೌಡ ವಂಶಸ್ಥರು ಮತ್ತೆ ಈ ಸ್ಥಳಕ್ಕೆ ಬರುತ್ತಾರೆ. ಆದರೆ ಚಿಕ್ಕಪ್ಪ ಗೌಡನಿಗೆ ಇಲ್ಲಿ ಆಡಳಿತ ನಡೆಸಲು ಸಾಧ್ಯವಾಗಲಿಲ್ಲ. ಕಾರಣ ಉತ್ತರ ಭಾರತದಲ್ಲಿ ಬಹುಮನಿಯರ ಆಡಳಿತ ಬಾಳ ಬಲಿಷ್ಠವಾಗಿತ್ತು. ಆಗ ಕಮ್ಮಾರ್ ಉದ್ದಿನ್ ಅತ್ಯಂತ ಬಲಿಷ್ಠ ಸೈನ್ಯದೊಂದಿಗೆ ದಕ್ಷಿಣದ ಕಡೆ ಬರುತ್ತಾನೆ. ಆಗ ಚಿಕ್ಕಪ್ಪ ಗೌಡನ ವಂಶಸ್ಥರು ಮತ್ತೆ ಅನಿವಾರ್ಯವಾಗಿ ಮಿಡಿಗೇಶಿ ಪಲಾಯನ ಮಾಡುತ್ತಾರೆ. ನಂತರ ಈ ಕೋಟೆಯು ಬಹುಮನಿ ಅರಸರ ಪಾಲಾಗುತ್ತಿದೆ.
ಭೇಟಿ ನೀಡಿ