ಶ್ರೀ ಸಿದ್ದಗಂಗಾ ಮಠ

ಶ್ರೀ ಸಿದ್ದಗಂಗಾ ಮಠವು ಕರ್ನಾಟಕ ರಾಜ್ಯದ ತುಮುಕೂರು ಜಿಲ್ಲೆಯ ಇರುವ ಪ್ರಮುಖ ಧಾರ್ಮಿಕ ಮತ್ತು ಶೈಕ್ಷಣಿಕ ಸಂಸ್ಥೆಯಾಗಿದ್ದು, ಆಧ್ಯಾತ್ಮಿಕತೆ, ಶಿಕ್ಷಣ ಮತ್ತು ಸಾಮಾಜಿಕ ಕಲ್ಯಾಣಕ್ಕೆ ತನ್ನ ಕೊಡುಗೆಗಳಿಗೆ ಪ್ರಸಿದ್ದಿ ಪಡೆದಿದೆ. ಶ್ರೀ ಸಿದ್ದಗಂಗಾ ಮಠವು “ಶಿವಯೋಗಿ ಸಿದ್ದಪುರುಷರ” ನಿರಂತರ ಸಾಲನ್ನು ಪೋಷಿಸುವ ಪುರಾತನ ಆಶ್ರಮವಾಗಿದೆ. 15 ನೇ ಶತಮಾನದಲ್ಲಿ ಶ್ರೀ ಗೋಸಲ ಸಿದ್ದೇಶ್ವರ ಸ್ವಾಮೀಜಿಯವರು ಮಠವನ್ನು ಸ್ಥಾಪಿಸಿದರು.

ಈ ಮಠವು ಬೆಂಗಳೂರಿನಿಂದ ಸುಮಾರು 65 ಕಿ.ಮೀ ದೂರದಲ್ಲಿದೆ. ತುಮುಕೂರು ನಗರದಿಂದ ಸುಮಾರು 05 ಕಿ.ಮೀ ದೂರದಲ್ಲಿದೆ ಹಾಗೂ ತುಮುಕೂರು ರೈಲ್ವೆ ನಿಲ್ದಾಣವು ಹತ್ತಿರದ ರೈಲು ನಿಲ್ದಾಣವಾಗಿದ್ದು ಕೇವಲ 07 ಕಿ.ಮೀ ದೂರದಲ್ಲಿದೆ.

ಶ್ರೀ ಸಿದ್ಧಗಂಗಾ ಮಠವು 1963 ರಲ್ಲಿ ಶ್ರೀ ಸಿದ್ದಗಂಗಾ ಎಜುಕೇಶನ್ ಸೊಸೈಟಿಯನ್ನು ಸ್ಥಾಪಿಸಿತು ಮತ್ತು 128 ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ. ಮಠವು ರೈತರ ಅನುಕೂಲಕ್ಕಾಗಿ ವಾರ್ಷಿಕ ಕೃಷಿ ಮತ್ತು ಕೈಗಾರಿಕಾ ಪ್ರದರ್ಶನವನ್ನು ಸಹ ಆಯೋಜಿಸುತ್ತದೆ.

ಶ್ರೀ ಸಿದ್ದಗಂಗಾ ಮಠವು 10,000 ಕ್ಕೂ ಹೆಚ್ಚು ಬಡ ಮಕ್ಕಳಿಗೆ ಉಚಿತ ಊಟ ಮತ್ತು ವಸತಿಯೊಂದಿಗೆ ಯಾವುದೇ ಜಾತಿ, ಧರ್ಮದ ಭೇದಭಾವವಿಲ್ಲದೆ ಶಿಕ್ಷಣವನ್ನು ನೀಡುತ್ತಿರುವ ವಿಶಿಷ್ಟ ಗುರುಕುಲವಾಗಿದೆ. ಮಠವು ವಿವಿಧ ಸ್ಥಳಗಳಲ್ಲಿ ಅಂಧ ಶಾಲೆಗಳನ್ನು ನಡೆಸುತ್ತಿದೆ ಮತ್ತು 100 ಕ್ಕೂ ಹೆಚ್ಚು ಅಂಧ ಮಕ್ಕಳಿಗೆ ಸ್ವತಂತ್ರ ಹಾಸ್ಟೆಲ್ ಸೌಲಭ್ಯಗಳೊಂದಿಗೆ ಉಚಿತ ಶಿಕ್ಷಣ ಮತ್ತು ಆಹಾರವನ್ನು ನೀಡಲಾಗುತ್ತದೆ.

ಭೇಟಿ ನೀಡಿ
ತುಮಕೂರು ತಾಲೂಕು ಇತರೆ ಪ್ರವಾಸಿ ಸ್ಥಳಗಳು


ಭೇಟಿ ನೀಡಿ
ತುಮಕೂರು ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು