ಅಕ್ಕ ನಾಗಮ್ಮ ಗವಿ

ಅಕ್ಕನಾಗಮ್ಮ ಗವಿಯು ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನಲ್ಲಿ ಮೊರ್ಖಂಡಿ ಗ್ರಾಮದಲ್ಲಿ ಇರುವ 12ನೆಯ ಶತಮಾನದ ಕನ್ನಡ ನಾಡಿನ ಶಿವಶರಣೆಯರಲ್ಲಿ ಅಗ್ರಗಣ್ಯ ಶರಣೆ ಅಕ್ಕನಾಗಮ್ಮನಿಗೆ ಸಮರ್ಪಿತವಾದ ಗವಿಯಾಗಿದೆ. ಶಿವಶರಣೆ ಅಕ್ಕನಾಗಮ್ಮ ಬಸವಾದಿ ಶರಣರ ಸಾಕ್ಷಿ ಪ್ರಜ್ಞೆಯಾಗಿ ಇಡೀ ಶರಣ ಸಂಕುಲ ಹಾಗೂ ವಚನ ಸಾಹಿತ್ಯ ರಕ್ಷಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಧೀರ ಮಹಿಳೆ.

ಈ ಸ್ಥಳವು ಬೆಂಗಳೂರಿನಿಂದ 714 ಕಿ.ಮೀ (NH50 ಮೂಲಕ), 727 ಕಿ.ಮೀ (NH 44 ಹೈದರಾಬಾದ್ ಮೂಲಕ) ಮತ್ತು ಬೀದರ್ ನಿಂದ 79 ಕಿ.ಮೀ ದೂರದಲ್ಲಿದೆ. ಹಾಗೂ ಬಸವಕಲ್ಯಾಣದಿಂದ 3 ಕಿ.ಮೀ ದೂರದಲ್ಲಿದೆ.

ಇದು ಎರಡನೇ ಅತಿದೊಡ್ಡ ಗವಿ. ಸುಮಾರು ನೂರು ಅಡಿ ಉದ್ದವಿರುವ ಈ ಗವಿಯು, ದಾಸೋಹದ ಮನೆಯೂ ಆಗಿತ್ತು. ಅಕ್ಕನಾಗಮ್ಮ ಬಸವಣ್ಣನವರ ಸಹೋದರಿ ಹಾಗೂ 12ನೆಯ ಶತಮಾನದ ಕನ್ನಡ ನಾಡಿನ ಶಿವಶರಣೆಯರಲ್ಲಿ ಅಗ್ರಗಣ್ಯಳು. ಶಾಂತವಾದ ಮಹಿಳಾ ಆಧ್ಯಾತ್ಮಭೂಮಿ, ತ್ಯಾಗದ ತವರು, ಯೋಗದ ಜಗುಲಿ ಮತ್ತು ಶಿವಯೋಗದ ಮೂರ್ತಿರೂಪವೇ ಅಕ್ಕನಾಗಮ್ಮ. ಬಸವೇಶ್ವರರು ಕೈಗೊಂಡ ಎಲ್ಲ ಚಟುವಟಿಕೆಗಳಲ್ಲೂ ಈಕೆ ಬೆಂಬಲಿಗಳಾಗಿದ್ದಳು. ಕರ್ನಾಟಕದ ಶಿವಶಣರು ಈಕೆಯ ಬಗ್ಗೆ ಹೆಚ್ಚಿನ ಭಕ್ತಿಗೌರವಗಳನ್ನು ತಾಳಿದ್ದಾರೆ. ಚೆನ್ನಬಸವಪುರಾಣ, ಪುರಾತನ ದೇವಿಯರ ತ್ರಿಪದಿ, ಬಸವಪುರಾಣ ಈ ಗ್ರಂಥಗಳಲ್ಲಿ ಈಕೆಯ ಹೆಸರು ನಿರೂಪಿತವಾಗಿದೆ.

ಬಾಗೇವಾಡಿ ಈಕೆಯ ಜನ್ಮಸ್ಥಳ. ತಂದೆ ಮಾದರಸ ಮತ್ತು ತಾಯಿ ಮಾದಲಾಂಬಿಕೆ. ಮಗ ಚನ್ನಬಸವೇಶ್ವರ, ಸಹೋದರ ಬಸವೇಶ್ವರ, ಗುರು ಕಪ್ಪಡಿ ಸಂಗಮದ ಜಾತವೇದಸ್ವಾಮಿ. ಮಹಾಯೋಗಿನಿಯಾದ ಈಕೆಯ ಸ್ಮಾರಕಗಳು ಬಿಜಾಪುರ ಜಿಲ್ಲೆಯ ಇಂಗಳೇಶ್ವರ, ಬೀದರ್ ಜಿಲ್ಲೆಯ ಕಲ್ಯಾಣ, ಉತ್ತರಕನ್ನಡ ಜಿಲ್ಲೆಯ ಉಳವಿಯಲ್ಲಿವೆ.

ಭೇಟಿ ನೀಡಿ
ಬಸವಕಲ್ಯಾಣ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಬೀದರ್ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section