ರಾಮನಗರ ರಾಮದೇವರ ಬೆಟ್ಟ ರಣಹದ್ದು ಆಭರಣವು ಕರ್ನಾಟಕ ರಾಜ್ಯದ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲ್ಲೂಕಿನಲ್ಲಿರುವ ಒಂದು ಬೆಟ್ಟವಾಗಿದೆ. ಈ ಪ್ರದೇಶವನ್ನು ಏಷ್ಯಾದ ಅತಿ ಹೆಚ್ಚು ರಣಹದ್ದು ಪ್ರದೇಶ ಎಂದು ಕರೆಯುತ್ತಾರೆ. ರಾಮದೇವರ ಬೆಟ್ಟವು ದಕ್ಕಿಣದ ಚಿತ್ರಕೂಟ ಎಂದೇ ಪ್ರಸಿದ್ದಿಯಾಗಿದೆ. ಈ ಬೆಟ್ಟವು ಸಮುದ್ರ ಮಟ್ಟದಿಂದ 1000 ಅಡಿಗಳಿಗಿಂತಲೂ ಹೆಚ್ಚು ಎತ್ತರದಲ್ಲಿ ಇದೆ.
ಈ ಬೆಟ್ಟವು ಬೆಂಗಳೂರಿಂದ 45 ಕಿ.ಮೀ ಮತ್ತು ರಾಮನಗರದಿಂದ ಕೇವಲ 06 ಕಿ.ಮೀ ದೂರದಲ್ಲಿದೆ ಹಾಗೂ ರಾಮನಗರ ರೈಲ್ವೆ ನಿಲ್ದಾಣದಿಂದ 06 ಕಿ.ಮೀ ದೂರದಲ್ಲಿದೆ.
ಈ ಬೆಟ್ಟಕ್ಕೆ ಚಾರಣ ಗೊಳ್ಳಲು ಪ್ರವೇಶ ಶುಲ್ಕ ಮತ್ತು ಪಾರ್ಕಿಂಗ್ ಶುಲ್ಕ ಇರುತ್ತದೆ. ಪ್ರವೇಶ ಶುಲ್ಕವೂ ಪ್ರತಿ ವ್ಯಕ್ತಿಗೆ Rs.25/- ಇರುತ್ತದೆ. ಇಲ್ಲಿ ರಣಹದ್ದುಗಳ ಬಗ್ಗೆ ಮಾಹಿತಿ ನೀಡುವ ಮಾಹಿತಿ ಕೇಂದ್ರವು ಕೂಡ ಇದೆ.
ರಾಮದೇವರ ಬೆಟ್ಟದ ಪ್ರಾರಂಭದಲ್ಲಿ ಆಂಜನೇಯದ ಉದ್ಬವ ಮೂತಿಯನ್ನು ಕಾಣಬಹುದು. ಬೆಟ್ಟದ ಮೇಲೆ ರಾಮೇಶ್ವರ ಮತ್ತು ಪಟ್ಟಾಭಿರಾಮ ದೇವಾಲಯವು ಕೂಡ ಇದೆ.
ಇತಿಹಾಸ
ರಾಮ ಸೀತೆ ಲಕ್ಷ್ಮಣ ವನವಾಸದಲ್ಲಿ ಇಲ್ಲಿ ನೆಲೆಸಿದ್ದರಂತೆ . ಆಗ ಇಲ್ಲಿ ಕಾಕಾಸುರ ಎಂಬ ರಾಕ್ಷಸ ತೊಂದರೆ ಕೊಡುತ್ತಾ ಇದ್ದನಂತೆ. ಇದರಿಂದ ಕೋಪಗೊಂಡ ಶ್ರೀರಾಮನು ಕಾಕಾಸುರನ ಕಣ್ಣನ್ನು ಬಾಣದಿಂದ ಹೊಡೆದು ಕಿತ್ತು ಹಾಕುತ್ತಾನೆ ಮತ್ತು ರಾಮನು ಕಾಕಾ ಸುರನಿಗೆ ಶಾಪ ನೀಡುತ್ತಾನೆ. ಅಂದಿನಿಂದ ಈ ಬೆಟ್ಟದಲ್ಲಿ ಒಂದು ಕಾಗೆಯು ಸಹ ಸಿಗುವುದಿಲ್ಲ.
ಬೆಟ್ಟದ ಮೇಲೆ ರಾಮೇಶ್ವರ ಮತ್ತು ಪಟ್ಟಾಭಿರಾಮ ದೇವಾಲಯವಿದ್ದು, ದೇಗುಲದ ಮುಂಬಾಗದಲ್ಲಿ ಬ್ರಹದಾಕಾರದಲ್ಲಿ ನಿಂತಿರುವ ಬಂಗಿಯಲ್ಲಿ ಏಳು ಬಂಡೆಗಳಿವೆ. ಸಪ್ತ ಋಷಿಗಳು ಸೀತೆಗಾಗಿ ಕಟ್ಟಿಸಿದಂತ ಕೊಳದಲ್ಲಿ ಸ್ನಾನ ಮಾಡಿ, ಅಲ್ಲಿ ಹೋಗಿ ತಪಸ್ಸು ಮಾಡಿ ಅಲ್ಲೇ ಕಲ್ಲಾದರಂತೆ ಎಂಬ ಸ್ಥಳ ಪುರಾಣವಿದೆ.
ಪಟ್ಟಾಭಿರಾಮ ದೇವಾಲಯಕ್ಕೆ ಈ ಹೆಸರು ಬರಲು ಒಂದು ಕಾರಣ ಇದೆ. ಪಟ್ಟಾಭಿಷೇಕ ವಾಗಿದ್ದ ರಾಮನ ಮೂರ್ತಿಯನ್ನು ಪ್ರತಿಷ್ಠಾಪನೆಗೆ ಎಂದು ತೆಗೆದುಕೊಂಡು ಹೋಗುವಾಗ, ಈ ಸಂದರ್ಭದಲ್ಲಿ ಸುಖಕರ ನೆಂಬ ರಾಕ್ಷಸನೊಬ್ಬ ದಾಳಿ ಮಾಡುತ್ತಾನೆ. ಮೂರ್ತಿಯನ್ನು ಅಲ್ಲೇ ಇಟ್ಟು ಅವನನ್ನು ಸೋಲಿಸಿ ಮೂರ್ತಿಯನ್ನು ಎತ್ತಲು ಹೋದಾಗ, ಆ ಮೂರ್ತಿಯು ಅಲ್ಲಿಂದ ಏಳುವುದಿಲ್ಲ.ಆಗ ಒಂದು ಆಕಾಶವಾಣಿಯು ನನಗೆ ಈ ಸ್ಥಳವು ಪ್ರಶಸ್ತವಾಗಿದೆ ನಾನು ಇಲ್ಲೇ ನಡೆಸುವೆ ಎಂದು ಕೇಳಿಸುತ್ತದೆ. ಆಗ ಆ ಮೂರ್ತಿಯನ್ನು ಇಲ್ಲೇ ಪ್ರತಿಷ್ಠಾಪಿಸಲಾಗುತ್ತದೆ. ಇಲ್ಲಿರುವ ಮೂರ್ತಿಯನ್ನು ಒಂದೇ ಶಿಲೆಯಲ್ಲಿ ಕೆತ್ತಲಾಗಿದೆ
ವನವಾಸದ ಸಂದರ್ಭದಲ್ಲಿ ಸೀತೆಗೆ ನೀರು ಬೇಕೆಂದು ಹೇಳಿದಾಗ, ರಾಮನು ಬಾಣ ಹೂಡಿ ಒಂದು ಕೊಳ ನಿರ್ಮಿಸುತ್ತಾನೆ. ಆ ಕೊಳವು ಕೂಡ ಇಲ್ಲೇ ಇದೆ. ಈ ಕೊಳದ ಆಳ ಇಲ್ಲಿಯವರೆಗೆ ಯಾರಿಗೂ ತಿಳಿದಿಲ್ಲ ಮತ್ತು ಯಾವುದೇ ಬೇಸಿಗೆ ಕಾಲದಲ್ಲೂ ಈ ಕೊಳವು ಬತ್ತಿಲ್ಲ.
ಭೇಟಿ ನೀಡಿ




