ಕೂಟಗಲ್ ತಿಮ್ಮಪ್ಪನ ಬೆಟ್ಟವು ಅಥವಾ T M ಬೆಟ್ಟವು ಕರ್ನಾಟಕ ರಾಜ್ಯದ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ರಾಮನಗರ ತಾಲೂಕಿನ ಕೂಟಗಲ್ ಗ್ರಾಮದಲ್ಲಿ ಇರುವ ಬೆಟ್ಟವಾಗಿದೆ. ಬೆಟ್ಟದ ಮೇಲೆ ಶ್ರೀ ತಿಮ್ಮಪ್ಪ ಸ್ವಾಮಿ ದೇವಾಲಯವಿದೆ.
ಈ ಬೆಟ್ಟವು ಬೆಂಗಳೂರಿಂದ 64 ಕಿ.ಮೀ ಮತ್ತು ರಾಮನಗರದಿಂದ 11 ಕಿ.ಮೀ ದೂರದಲ್ಲಿದೆ.
ಬೆಟ್ಟವನ್ನು ಮೆಟ್ಟಿಲಿನ ಮೂಲಕ ಹತ್ತಬಹುದು ಅಥವಾ ನೇರವಾಗಿಯೇ ವಾಹನದಿಂದಾಗಿಯೂ ಹೋಗಬಹುದಾಗಿದೆ. ಬೆಟ್ಟದ ಮೇಲೆ ನಿಂತು ನೋಡಿದರೆ ಸುತ್ತ-ಮುತ್ತಲಿನ ಪರಿಸರವನ್ನು ವೀಕ್ಷಿಸ ಬಹುದಾಗಿದೆ. ಬೆಟ್ಟದ ವಾಯುವ್ಯ ಭಾಗದಲ್ಲಿ ಕೂಡುಗಲ್ಲು, ಗಳಗಲ್ಲು, ಕ್ಯಾತನ ಕಲ್ಲು, ಮಡಿವಾಳೆ-ಕಲ್ಲು ಅಥವಾ ಅಗಸನ ಕಲ್ಲೆಂದು ಕರೆಯುವ ಒಂದರ ಪಕ್ಕ ಒಂದರಂತೆ ನಿಂತ ಮೂರು ಕೂಡುಗಲ್ಲುಗಳಿವೆ.
ಭೇಟಿ ನೀಡಿ








