ಷಹಾಜಿ ಮಹಾರಾಜ ಸಮಾಧಿಯು ಕರ್ನಾಟಕ ರಾಜ್ಯದ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಗ್ರಾಮದಲ್ಲಿದೆ. ಇದು ಛತ್ರಪತಿ ಶಿವಾಜಿಯವರ ತಂದೆಯಾದ ರಾಜ ಶ್ರೀ ಷಹಜಿಯವರ ಸಮಾಧಿಯಾಗಿದೆ. ಕ್ರಿ.ಶ. 1664ರ ಜನವರಿ 23ರಂದು ರಾಜ ಷಹಜಿಯವರು ಈ ಪ್ರದೇಶದಲ್ಲಿ ಬೇಟೆಯಾಡುವ ಸಂದರ್ಭದಲ್ಲಿ ಸಂಭವಿಸಿದ ಅಪಘಾತದಲ್ಲಿ ನಿಧನರಾದರು. ನಂತರ ಅವರ ಚಿತಾಭಸ್ಮವನ್ನು ಇದೇ ಸ್ಥಳದಲ್ಲಿ ಸಮಾಧಿ ಮಾಡಲಾಯಿತು.
ಷಹಾಜಿ ಮಹಾರಾಜ ಸಮಾಧಿಯ ದೂರಗಳು
- ಬೆಂಗಳೂರು – 255 ಕಿ.ಮೀ
- ದಾವಣಗೆರೆ – 51 ಕಿ.ಮೀ
- ಚನ್ನಗಿರಿ – 12 ಕಿ.ಮೀ
- ಹೊಳಲ್ಕೆರೆ ರೈಲ್ವೆ ನಿಲ್ದಾಣ – 16 ಕಿ.ಮೀ
ಭೇಟಿ ನೀಡಿ




